ಕಾನ್ಪುರ ಟೆಸ್ಟ್​​ ; ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ 345 ರನ್​ಗಳಿಗೆ ಆಲೌಟ್​​


ಕಾನ್ಪುರದ ಗ್ರೀನ್​ ಪಾರ್ಕ್​​ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ಎದುರಿನ ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 345 ರನ್​​ಗಳಿಗೆ ಆಲ್​​ಔಟ್​​ ಆಗಿದೆ.

258 ರನ್​​ಗಳಿಗೆ 4 ವಿಕೆಟ್​ ಕಳೆದುಕೊಂಡು 2ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ, ಸತತ ವಿಕೆಟ್​ ಕಳೆದುಕೊಂಡು ಕುಸಿತ ಕಂಡಿತು. ನಿನ್ನೆ ಶತಕದ ಜೊತೆಯಾಟವಾಡಿ ಕ್ರೀಸ್​ ಕಾಯ್ದುಕೊಂಡಿದ್ದ ರವೀಂದ್ರ ಜಡೇಜಾ ಮತ್ತು ಶ್ರೇಯಸ್​​​ ಅಯ್ಯರ್​​ ಇಂದು ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಅಜೇಯ 50 ರನ್​​ಗಳೊಂದಿಗೆ ಬ್ಯಾಟಿಂಗ್​ ಮುಂದುವರಿಸಿದ ಜಡ್ಡು, 2ನೇ ದಿನದಾಟದಲ್ಲಿ ಒಂದೂ ರನ್​ ಪೇರಿಸದೆ ಟಿಮ್​ ಸೌಥಿ ಬೌಲಿಂಗ್​​​ನಲ್ಲಿ ಬೌಲ್ಡ್​ ಆದರು.

ಜಡೇಜಾ ಬೆನ್ನಲ್ಲೆ ವೃದ್ಧಿಮಾನ್​ ಸಾಹ ಕೂಡ, ಸೌಥಿ ಬೌಲಿಂಗ್​​​​​​ನಲ್ಲಿ ವಿಕೆಟ್​​​​​ ಕೀಪರ್​​​​​​ಗೆ ಕ್ಯಾಚ್​​​ ನೀಡಿ ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿ ತಾಳ್ಮೆಯ ಆಟವಾಡಿದ ಶ್ರೇಯಸ್​ ಅಯ್ಯರ್​, ಚೊಚ್ಚಲ ಟೆಸ್ಟ್​ ಶತಕ ಸಿಡಿಸಿದ್ರು. ಅಜೇಯ 75ರನ್​ಗಳಿಂದ 2ನೇ ದಿನದಾಟದ ಆರಂಭಿಸಿದ ಅಯ್ಯರ್​, ಜೆಮಿಸನ್ ಎಸೆದ 91.1ನೇ ಓವರ್​​​ನಲ್ಲಿ ಎರಡು ಗಳಿಸಿ ತಮ್ಮ ಚೊಚ್ಚಲ ಶತಕವನ್ನ ಪೂರೈಸಿದರು.105ರನ್​ ಗಳಿಸಿದ್ದಾಗ ಅಯ್ಯರ್, ಔಟಾಗಿ ಪೆವಿಲಿಯನ್​ ಸೇರಿದರು. ಅದರ ಬೆನ್ನಲ್ಲೇ ಅಕ್ಷರ್​​ ಪಟೇಲ್​ ಕೂಡ ವಿಕೆಟ್​ ಒಪ್ಪಿಸಿದರು.

ಲಂಚ್​ ಬ್ರೇಕ್​ನ ಬಳಿಕ 38 ರನ್​ಗಳಿಸಿದ್ದ ಅಶ್ವಿನ್​ ಕೂಡ, ಅಜಾಜ್​ ಪಟೇಲ್​ ಬೌಲಿಂಗ್​ನಲ್ಲಿ ಔಟಾದ್ರು. ಅಶ್ವಿನ್​ ಬೆನ್ನಲ್ಲೇ ಇಶಾಂತ್​ ಶರ್ಮಾ ಡಕೌಟ್​​ ಆದ್ರು. ಪರಿಣಾಮ 345 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​​ ಆಯ್ತು. 10 ರನ್​ಗಳೊಂದಿಗೆ ಉಮೇಶ್​ ಯಾದವ್​ ಅಜೇಯರಾಗುಳಿದರೆ, ಕಿವೀಸ್​ ಪರ ಟಿಮ್​ ಸೌಥಿ 5, ಕೈಲ್​ ಜೆಮಿಸನ್​ 3, ಅಜಾಜ್​ ಪಟೇಲ್​ 2 ವಿಕೆಟ್​​ ಕಬಳಿಸಿದ್ರು.

News First Live Kannada


Leave a Reply

Your email address will not be published. Required fields are marked *