ಕಾನ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಟೀಮ್ ಇಂಡಿಯಾ 345 ರನ್ಗಳಿಗೆ ಆಲೌಟಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ 2ನೇ ಸೆಷನ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 72 ರನ್ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದಿರುವ ಟಾಮ್ ಲಾಥಮ್, ವಿಲ್ ಯಂಗ್ ಎಚ್ಚರಿಕೆಯ ಆಟದ ಮೋರೆ ಹೋಗಿದ್ದಾರೆ. 72 ಎಸೆತ ಎದುರಿಸಿರುವ ಲಾಥಮ್ 23 ರನ್ ಕಲೆ ಹಾಕಿದ್ರೆ, 86 ಎಸೆತಗಳನ್ನ ಎದುರಿಸಿರುವ 46 ರನ್ಗಳೊಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ. ಟೀ ವಿರಾಮದ ವೇಳೆಗೆ ಕಿವೀಸ್ ಪಡೆ 72 ರನ್ಗಳಿಸಿದ್ದು, 273 ರನ್ಗಳ ಹಿನ್ನಡೆಯಲ್ಲಿದೆ.
Tea on day two in Kanpur ☕️
A solid session for the visitors. #WTC23 | #INDvNZ | https://t.co/9OZPrsh0Tm pic.twitter.com/tFj16rXE8X
— ICC (@ICC) November 26, 2021