ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶವಿತ್ತು. ಕೊನೆಗೂ ಮ್ಯಾಚ್ ರೋಚಕ ಡ್ರಾ ಆದ್ದರಿಂದ ಭಾರತ ಗೆಲ್ಲುವ ಅವಕಾಶ ಕೈ ಚೆಲ್ಲಿಕೊಂಡಿತ್ತು. ಹೀಗಾಗಿ ಟೀಂ ಇಂಡಿಯಾ ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು. ಆದರೀಗ, ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ರಹಾನೆ ನಾಯಕತ್ವವನ್ನ ಸಮರ್ಥಿಸಿಕೊಂಡಿದ್ದಾರೆ.
ಕಾನ್ಪುರ ಟೆಸ್ಟ್ ಪಂದ್ಯವನ್ನು ನಾನು ಕೂಡ ನೋಡಿದೆ. ಟೀಂ ಆಗಿ ಎಲ್ಲರೂ ಗೆಲ್ಲೋಕೆ ಪ್ರಯತ್ನಿಸಿದರು. ಆದರೆ, ನಿಸ್ಸಂಶಯವಾಗಿ ಪ್ರತಿಯೊಬ್ಬರು ವಿಭಿನ್ನ ಸಂಗತಿಗಳೊಂದಿಗೆ ತಂಡವನ್ನು ಮುನ್ನಡೆಸುವುದಂತೂ ನಿಜ. ಆ ಸನ್ನಿವೇಶದಲ್ಲಿ ನಾನು ಆಡಿದ್ದರೆ, ಇದರ ಬಗ್ಗೆ ಸಂಪೂರ್ಣವಾಗಿ ನಿಮ್ಮ ಬಳಿ ವಿವರಿಸುತ್ತಿದ್ದೆ ಎಂದರು.
ಒಂದಂತೂ ಸತ್ಯ, ಒಂದು ಟೀಂ ಆಗಿ ಭಾರತ ಪಂದ್ಯ ಗೆಲ್ಲಲು ಸಾಧ್ಯವಾದಷ್ಟು ಪ್ರಯತ್ನವನ್ನು ನಡೆಸಿದೆ. ಅದರಂತೆ ಬೌಲರ್ಗಳನ್ನ ಅತ್ಯುತ್ತಮವಾಗಿ ರೊಟೇಟ್ ಮಾಡಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲೂ ಅವರು ಏನು ಮಾಡಿದ್ದರು ಎಂಬುದುದಕ್ಕೆ ಉತ್ತಮ ಉದಾಹರಣೆ ಎಂದು ರಹಾನೆಯನ್ನ ಸಮರ್ಥಿಸಿಕೊಂಡಿದ್ದಾರೆ.