
ಪೊಲೀಸ್ ಕಾನ್ಸ್ಟೇಬಲ್ ರಮೇಶ ಮತ್ತು ಅವರ ತಮ್ಮ ಶ್ರೀಕಾಂತ
ಪೊಲೀಸ್ ವೃತ್ತಿಯೊಂದಿಗೆ ಹಾವಿನ ರಕ್ಷಣೆಯ ಹವ್ಯಾಸ, ಹಾವು ರಕ್ಷಣೆ ವೇಳೆ ಪತ್ತೆಯಾದ ಮೊಟ್ಟೆಗಳನ್ನು ಮನೆಗೆ ತಂದು ಆರೈಕೆ, ಇದೀಗ ಮೊಟ್ಟೆಗಳು ಒಡೆದು ಹೊರಬಂದಿರುವ ನಾಗರಹಾವಿನ ಮರಿಗಳು ಬುಸುಗುಡುತ್ತಿವೆ. ವಿಡಿಯೋ ಇಲ್ಲಿದೆ ನೋಡಿ.
ಹಾವೇರಿ: ಪೊಲೀಸ್ ಸಿಬ್ಬಂದಿಯೊಬ್ಬರು ಹಾವು ಹಿಡಿಯಲು ಹೋಗಿದ್ದ ವೇಳೆ ದೊರೆತಿದ್ದ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮನೆಯಲ್ಲಿ ಮರಿ ಮಾಡಿಸಲು ತಂದಿಟ್ಟಿದ್ದರು. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ. ಸದ್ಯ 15 ನಾಗರ ಹಾವಿನ ಮರಿಗಳು ಬುಸುಗುಡಲು ಆರಂಭಿಸಿದ್ದು, ಕಾನ್ಸ್ಟೇಬಲ್ ರಮೇಶ ಹರಿಜನ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.