ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜಿಲ್ಲಾಡಳಿತ ಕಠಿಣ ಲಾಕ್‍ಡೌನ್‍ನನ್ನ ಮತ್ತೆ ನಾಲ್ಕು ದಿನಗಳ ಕಾಲ ಮುಂದುವರೆಸಿದೆ. ಆದರೆ, ಜನರ ಅನುಕೂಲಕ್ಕಾಗಿ ಕಠಿಣ ಲಾಕ್‍ಡೌನ್‍ನಲ್ಲಿ ಕೆಲವೊಂದು ಬದಲಾವಣೆಗಳನ್ನ ತಂದಿದೆ.

ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಿದ್ದರೂ ಕೂಡ ಕಳೆದೊಂದು ನಾಲ್ಕು ದಿನಗಳ ಹಿಂದೆ ಇದ್ದ ಪ್ರಕರಣಗಳಿಲ್ಲ. ಜೊತೆಗೆ, ಗ್ರಾಮೀಣ ಭಾಗದಲ್ಲಿನ ತೊಂದರೆಗಳು ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆ ಜಿಲ್ಲಾಡಳಿತ ಗ್ರಾಮೀಣ ಭಾಗದಲ್ಲಿ ಜನರ ಅನುಕೂಲಕ್ಕಾಗಿ ಬೆಳಗ್ಗೆ  6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವಂತಿಲ್ಲ. ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಖರೀದಿಸಬಹುದಾಗಿದೆ.

ಒಂದೆಡೆಯಿಂದ ಮತ್ತೊಂದೆಡೆಗೆ ಅಥವಾ ನಗರದ ಪ್ರದೇಶಗಳಿಗೆ ಭೇಟಿ ನೀಡುವಂತಿಲ್ಲ. ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನ ತೆರೆಯುವಂತಿಲ್ಲ. ಹೋಟೆಲ್ ಹಾಗೂ ದಿನಸಿ ಅಂಗಡಿಗಳಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಉಳಿದಂತೆ ನಗರದಲ್ಲಿ ಹಾಪ್‍ಕಾಮ್ಸ್‍ಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ವರಗೆ ಹೋಂ ಡೆಲಿವರಿಗೆ ಅವಕಾಶ ನೀಡಿದ್ದಾರೆ. ಬೀದಿ ಮೇಲೆ ಹಣ್ಣು-ತರಕಾರಿ ವ್ಯಾಪಾರ ಮಾಡಲು ಇಡೀ ದಿನ ಅವಕಾಶ ನೀಡಿದ್ದಾರೆ.

The post ಕಾಫಿನಾಡಲ್ಲಿ ಕಂಟ್ರೋಲ್​ಗೆ ಬಾರದ ಕೊರೊನಾ: ಮತ್ತೆ 4 ದಿನಗಳ ಕಾಲ ಲಾಕ್​ಡೌನ್​ appeared first on News First Kannada.

Source: newsfirstlive.com

Source link