ಚಂದು ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಎಂಬುದು ಕೆಲವರ ಆಸೆ.
ಕಾಫಿ ನಾಡು ಚಂದು (Cofffe Nadu Chandu) ಅವರು ಸಖತ್ ಟ್ರೆಂಡ್ನಲ್ಲಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಸ್ಟೇಟಸ್ ಹೀಗೆ ಎಲ್ಲ ಕಡೆಗಳಲ್ಲೂ ಅವರದ್ದೇ ವಿಡಿಯೋ ರಾರಾಜಿಸುತ್ತಿದೆ. ‘ನಾನು ಶಿವಣ್ಣ..ಪುನೀತಣ್ಣ (Puneeth Rajkumar) ಅವರ ಅಭಿಮಾನಿ..’ ಎಂದು ಆರಂಭ ಆಗುವ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಫಿ ನಾಡು ಚಂದು ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿದ್ದಾರೆ ಎಂಬ ಚರ್ಚೆ ಈ ಮೊದಲಿನಿಂದಲೂ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆಯಬೇಕು ಎಂಬ ಒತ್ತಾಯ ಜೋರಾಗಿದೆ. ಇದನ್ನು ಸ್ವತಃ ಕಾಫಿ ನಾಡು ಚಂದು ಅವರು ಬೆಂಬಲಿಸಿದ್ದಾರೆ.
ಕಾಫಿ ನಾಡು ಚಂದು ಅವರು ಚಿಕ್ಕಮಗಳೂರಿನವರು. ಅವರು ವೃತ್ತಿಯಲ್ಲಿ ಆಟೋ ಡ್ರೈವರ್. ಈ ಮಧ್ಯೆ ಅವರು ರೀಲ್ಸ್ ಮಾಡೋಕೆ ಆರಂಭಿಸಿದ್ದರು. ಶಿವರಾಜ್ಕುಮಾರ್ ಹಾಗೂ ಪುನೀತ್ ಅಭಿಮಾನಿ ಆಗಿರುವ ಅವರು ಅದನ್ನು ಪ್ರತಿ ವಿಡಿಯೋದಲ್ಲಿ ಹೇಳುತ್ತಾರೆ. ಚಂದು ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಎಂಬುದು ಕೆಲವರ ಆಸೆ. ಇದಕ್ಕಾಗಿ ಆಂದೋಲನ ಶುರುವಾಗಿದೆ.
‘ಬಿಗ್ ಬಾಸ್ ಒಟಿಟಿಗೆ ವೈಲ್ಡ್ ಕಾರ್ಡ್ ಮೂಲಕ ಯಾರು ಎಂಟ್ರಿ ಪಡೆಯಬೇಕು’ ಎಂಬ ಪ್ರಶ್ನೆಯೊಂದಿಗೆ ಸ್ಥಳೀಯ ಮಾಧ್ಯಮವೊಂದು ವೀಕ್ಷಕರ ಎದುರು ಹೋಗಿತ್ತು. ಇದರಲ್ಲಿ ಬಹುತೇಕರು ಕಾಫಿ ನಾಡು ಚಂದು ಅವರ ಹೆಸರನ್ನು ಹೇಳಿದ್ದಾರೆ. ಈ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಚಂದು ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಈ ಆಂದೋಲನಕ್ಕೆ ತಮ್ಮ ಬೆಂಬಲವೂ ಇದೆ ಎಂಬುದನ್ನು ಹೇಳಿದ್ದಾರೆ.