ಕಾಬೂಲ್: ಅಫ್ಗಾನಿಸ್ತಾನದ ಕಾಬೂಲ್​ನ ಶೀಟೆ ಜಿಲ್ಲೆಯ ಶಾಲೆಯೊಂದರ ಬಳಿ ಬಾಂಬ್ ಸ್ಫೋಟಗೊಂಡಿದ್ದು 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಸಾವನ್ನಪ್ಪಿದವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು ಅಲ್ಲಿನ ಸರ್ಕಾರದ ವಕ್ತಾರ ತಿಳಿಸಿದ್ದಾರೆ.

ಸ್ಥಳಕ್ಕೆ ಆ್ಯಂಬುಲೆನ್ಸ್​ಗಳು ದೌಡಾಯಿಸಿದ್ದು ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸೈಯದ್ ಅಲ್-ಶಾಹ್ದಾ ಶಾಲೆಯ ಬಳಿ ಈ ದುರ್ಘಟನೆ ಸಂಭವಿಸಿದೆ. ಇನ್ನು ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

 

 

The post ಕಾಬೂಲ್​ನ ಶಾಲೆಯೊಂದರ ಬಳಿ ಬಾಂಬ್ ಸ್ಫೋಟ.. 25 ಕ್ಕೂ ಹೆಚ್ಚು ಸಾವು appeared first on News First Kannada.

Source: newsfirstlive.com

Source link