ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್‌ ಅಂತಾ ಹೇಳಿದ್ರೆ ಅದು ನಗೆಯ ಹಬ್ಬ. ಆ ಶೋ ನೋಡೋರಿಗೆ ನಗು ಹಂಡ್ರೆಂಡ್‌ ಪರ್ಸೆಂಟ್‌ ಗ್ಯಾರಂಟಿ. ಈ ಶೋನಲ್ಲಿ ಭಾಗವಹಿಸೋ ಜಡ್ಜ್‌ಗಳು ಸಹ ಸಖತ್ ಎಂಜಾಯ್ ಮಾಡ್ತಾರೆ. ಅದ್ರಲ್ಲೂ ನಟಿ ರಕ್ಷಿತಾ ಎಂಜಾಯ್ ಮಾಡೋ ಲೆವೆಲ್ಲೇ ಬೇರೇ.

ಇಷ್ಟೊಂದು ನಗೋ ರಕ್ಷಿತಾ ನಿನ್ನೆ ಎಮೋಷನಲ್ ಆಗಿದ್ರೂ ಅಂದ್ರೆ ನೀವು ನಂಬ್ಲೇಬೇಕು. ಸಿಕೆಸಿ ಜಡ್ಜ್‌ ನಿನ್ನೆ ಸೆಟ್‌ನಲ್ಲಿ ಸ್ವಲ್ಪ ಭಾವುಕರಾಗಿದ್ದರು. ಅದಕ್ಕೆ ಕಾರಣವೂ ಇತ್ತು. ರಕ್ಷಿತಾ ಜೊತೆಗೆ ಇಡೀ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್‌ ಟೀಮ್‌ ಕೊಂಚ ಬೇಸರದಲ್ಲಿತ್ತು. ಯಾಕಂದ್ರೆ, ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಿನ್ನೆ ಈ ಸೀಸನ್‌ನ ಕೊನೆಯ ಶೂಟ್ ನಡೆಯಿತು.

ನಿನ್ನೆ ಕಾಮಿಡಿ ಕಿಲಾಡಿಗಳು ಸೆಮಿಫೈನಲ್‌ ಶೂಟ್‌ ನಡೆಯಿತು. ಶೂಟ್‌ ಶುರುವಾಗೋ ಮುನ್ನವೇ ರಕ್ಷಿತಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನ ಅಪ್‌ಲೋಡ್‌ ಮಾಡಿದರು. ಜೊತೆಗೆ ಸೆಮಿಫೈನಲ್ ಶೂಟ್ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರೋ ಕೊನೆಯ ಶೂಟ್ ಇದು. ಇದೊಂದು ಭಾವುಕ ಕ್ಷಣ ಎಂದು ಬರೆದುಕೊಂಡಿದ್ದರು.

ನಿನ್ನೆ ಎಲ್ಲಾ ಸ್ಪರ್ಧಿಗಳು ರಕ್ಷಿತಾ ಮೇಡಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಕಳೆದ ಮಧುರ ಕ್ಷಣಗಳನ್ನ ಮೆಲುಕು ಹಾಕಿಕೊಂಡರು. ಸೆಮಿಫೈನಲ್‌ ಶೂಟ್‌ ನಡೆದಿದ್ದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ. ಆದ್ರೆ, ಫಿನಾಲೆ ಶೂಟ್‌ ನಡೆಯೋದು ಬೇರೇ ಸ್ಥಳದಲ್ಲಿ. ಅದಕ್ಕ ಈಗಾಗ್ಲೇ ಪ್ಲಾನ್ಸ್ ನಡೆಯುತ್ತಿದೆ. ಸಿಕೆಸಿ ಫಿನಾಲೆ ಗ್ರ್ಯಾಂಡ್ ಆಗಿ ಇರಲಿದೆ. ದೊಡ್ಡ ವೇದಿಕೆಯಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆ ಬೇರೇಡೆ ಪ್ಲಾನ್ ಆಗಿರೋದರಿಂದ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಿನ್ನೆ ಕೊನೆಯ ದಿನದ ಶೂಟ್ ನಡೆಯಿತು. ಇದೇ ಕಾರಣಕ್ಕೆ ನಟಿ ರಕ್ಷಿತಾ ಭಾವುಕರಾಗಿದ್ದರು.

The post ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್‌ ಸೆಟ್​​​ನಲ್ಲಿ ಭಾವುಕರಾದ ರಕ್ಷಿತಾ appeared first on News First Kannada.

Source: newsfirstlive.com

Source link