ಕಾಯಕವೇ ಕೈಲಾಸ ಅಂತ ಹೊಲದಲ್ಲಿ ಎಡೆಕುಂಟೆ ಹೊಡೆದು ತೋರಿದರು ಶ್ರೀನಿರಂಜನಾನಂದ ಪುರಿ ಸ್ವಾಮೀಜಿ | Sri Niranjananda Puri Swamiji sets an example by ploughing in a field

ಕಾಯಕವೇ ಕೈಲಾಸ ಎಂದರು ಬಸವಣ್ಣ. ಬದುಕಿನ ಎಲ್ಲ ಆಯಾಮಗಳನ್ನು ಬಹಳ ಸರಳವಾದ ಭಾಷೆಯಲ್ಲಿ ಹೇಳುತ್ತಾ ಅವರು ಸಾಮಾಜಿಕ ಸುಧಾರಣೆಗಳಿಗೆ ಕಾರಣರಾದರು. ಎರಡು ಪದಗಳ ಈ ಸಾಲನ್ನೇ ತೆಗೆದುಕೊಳ್ಳಿ, ಬಹಳ ಅರ್ಥಗರ್ಭಿತವಾದ ಮಾತಿದು. ಅನೇಕ ಶರಣರು ಮಠಾಧೀಶರು ಬಸವಣ್ಣನವರ ವಚನಗಳಿಗೆ ಬಸವತತ್ವಕ್ಕೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಕೇವಲ ಲಿಂಗಾಯತ ಮತ್ತು ವೀರಶೈವ ಮಠಗಳ ಪೀಠಾಧೀಶರೇ ಹಾಗೆ ನಡೆದುಕೊಂಡಿದ್ದಾರೆ ಅಂತೇನಿಲ್ಲ. ಈ ವಿಡಿಯೋ ನೋಡಿ. ನಿಮಗೆ ಹೊಲದಲ್ಲಿ ರೈತರೊಂದಿಗೆ ಎಡೆಕುಂಟೆ ಹೊಡೆಯುತ್ತಿರುವವರು ಕನಕಗುರು ಪೀಠಾಧಿಪತಿ ಶ್ರೀನಿರಂಜನಾನಂದ ಪುರಿ ಸ್ವಾಮೀಜಿಗಳು.

ಈ ಹೊಲ ದಾವಣಗೆರೆ ಜಿಲ್ಲೆಯಲ್ಲಿರುವ ಬೆಳ್ಳೂಡಿ ಗ್ರಾಮದ ಮಠಕ್ಕೆ ಸೇರಿದ್ದು. ಬಹಳ ಕ್ರಿಯಾಶೀಲರೂ ಮತ್ತು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉಮೇದಿಯ ಸ್ವಾಮೀಜಿಗಳು ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರದಂದು ಬೇರೆ ರೈತರ ಜೊತೆ ಎಡೆಕುಂಟೆ ಹೊಡೆಯಲು ಮುಂದಾದರು. ಈ ಹೊಲದಲ್ಲಿ ಬಿಳಿಜೋಳವನ್ನು ಬೆಳೆಯಲಾಗುತ್ತಿದೆ.

ಶ್ರೀನಿರಂಜನಾನಂದ ಪುರಿ ಸ್ವಾಮೀಜಿಗಳು, ವೃಥಾ ಕಾಲಕಳೆಯುವ ಮಠದ ಸಹಸ್ರಾರು ಅನುಯಾಯಿಗಳಿಗೆ ಮಾದರಿಯಾಗಿದ್ದಾರೆ. ಖುದ್ದು ಸ್ವಾಮೀಜಿಗಳೇ ಹೀಗೆ ಹೊಲದಲ್ಲಿ ಕೆಲಸಕ್ಕಿಳಿದರೆ ಅದು ಎಲ್ಲ ಸಮುದಾಯಗಳಿಗೆ ಪ್ರೇರಣೆ ಆಗುತ್ತದೆ.

ನಮಗೆ ಗೊತ್ತಿದೆ, ಕೆಲ ಮಠಾಧೀಶರು ವಿನಾಕಾರಣ ರಾಜಕಾರಣದಲ್ಲಿ ಮೂಗು ತೂರಿಸುತ್ತಾರೆ. ಅದು ಅವರ ಕ್ಷೇತ್ರವೇ ಅಲ್ಲ. ಮಠಕ್ಕೆ ಏನಾದರೂ ನೆರವು ಬೇಕಿದ್ದರೆ ನೇರವಾಗಿ ಸರ್ಕಾರಕ್ಕೆ ಆಗ್ರಹಿಸಿದರಾಯ್ತು. ಆದಕ್ಕೆ ರಾಜಕಾರಣ ಮಾಡುವ ಆಗತ್ಯವಿಲ್ಲ.

ತಮ್ಮ ಬಿಡುವಿನ ಸಮಯವನ್ನು ಶ್ರೀನಿರಂಜನಾನಂದ ಪುರಿ ಸ್ವಾಮೀಜಿಗಳ ಹಾಗೆ ಸದ್ವಿನಿಯೋಗಪಡಿಸಿಕೊಂಡರೆ ಆಗಲೇ ಹೇಳಿದಂತೆ ಬಹಳಷ್ಟು ಜನರಿಗೆ ಅದು ಪ್ರೇರಣೆಯಾಗುತ್ತದೆ.

ಇದನ್ನೂ ಓದಿ:   ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

TV9 Kannada

Leave a comment

Your email address will not be published. Required fields are marked *