ಕಾರವಾರದ ಮೂಳಂಗಿ ಗ್ರಾಮಹೊಕ್ಕು ಆಡನ್ನು ನುಂಗಿದ ಹೆಬ್ಬಾವನ್ನು ಉರಗ ತಜ್ಞ ರಜಾಖ್ ಸುರಕ್ಷಿತವಾಗಿ ಕಾಡಿಗೆ ಒಯ್ದುಬಿಟ್ಟರು | A snake expert rescues a python after it was spotted at a village in Karwar ARBಮೂಳಂಗಿಯಲ್ಲಿ ರಜಾಖ್ ಹೆಸರಿನ ಒಬ್ಬ ಉರಗ ತಜ್ಞರಿದ್ದಾರೆ. ಕುಟುಂಬದ ಸದಸ್ಯರು ಅವರಿಗೆ ವಿಷಯ ತಿಳಿಸಿದಾಕ್ಷಣ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿಂದ ಆಪರೇಷನ್ ಹೆಬ್ಬಾವು ಶುರುವಾಗಿದೆ. ರಜಾಖ್ ಗೆ ಹಾವು ಹಿಡಿಯುವುದರಲ್ಲಿ ಪರಿಣಿತಿ ಸಿದ್ಧಿಸಿದೆ.

Arun Belly


|

May 30, 2022 | 4:12 PM
ಕಾರವಾರ: ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಮೂಳಂಗಿ (Moolangi) ಹೆಸರಿನ ಒಂದು ಗ್ರಾಮವಿದೆ. ರವಿವಾರ ರಾತ್ರಿ ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಈ ಗ್ರಾಮಕ್ಕೆ ಬಂದ ಬಾರಿ ಗಾತ್ರದ ಹೆಬ್ಬಾವೊಂದಕ್ಕೆ (python) ಒಂದು ಮೇಕೆಯ (lamb) ರೂಪದಲ್ಲಿ ಆಹಾರವೇನೋ ಸಿಕ್ಕಿದೆ. ಆದರೆ ಅದನ್ನು ಬಳಿಕ ಹಾವಿಗೆ ವಾಪಸ್ಸು ಹೋಗಲಾಗಿಲ್ಲ. ಆಡನ್ನು ನುಂಗಿದ್ದರಿಂದ ಮೈಯೆಲ್ಲ ಭಾರವಾಗಿ ತೆವಳುವುದು ಅದಕ್ಕೆ ಕಷ್ಟವಾಗಿರಬಹುದು. ಹಾಗಾಗೇ ಅದು ಯಾರ ಮನೆಯ ಆಡನ್ನು ನುಂಗಿತ್ತೋ ಅದೇ ಮನೆಯ ಒಂದು ಖಾಲಿ ಕೋಣೆಯಲ್ಲಿ ಮುದುರಿಕೊಂಡು ಕುಳಿತುಬಿಟ್ಟಿದೆ. ಅದು ರಾತ್ರಿ ಸಮಯ ಬೇರೆ ಮಾರಾಯ್ರೇ. ಆ ಕೋಣೆಗೆ ಹೋದ ಮನೆಯ ಸದಸ್ಯರೊಬ್ಬರಿಗೆ ಹಾವು ಕಾಣಿಸಿದೆ ಮತ್ತು ಅವರು ಕುಟುಂಬದ ಇತರ ಸದಸ್ಯರ ಗಮನಕ್ಕೆ ತಂದಿದ್ದಾರೆ.

ಮೂಳಂಗಿಯಲ್ಲಿ ರಜಾಖ್ ಹೆಸರಿನ ಒಬ್ಬ ಉರಗ ತಜ್ಞರಿದ್ದಾರೆ. ಕುಟುಂಬದ ಸದಸ್ಯರು ಅವರಿಗೆ ವಿಷಯ ತಿಳಿಸಿದಾಕ್ಷಣ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿಂದ ಆಪರೇಷನ್ ಹೆಬ್ಬಾವು ಶುರುವಾಗಿದೆ. ರಜಾಖ್ ಗೆ ಹಾವು ಹಿಡಿಯುವುದರಲ್ಲಿ ಪರಿಣಿತಿ ಸಿದ್ಧಿಸಿದೆ. ಇದು ಭಾರಿ ಗಾತ್ರದ ಹೆಬ್ಬಾವು. ಅದರ ಬಾಲದ ಭಾಗವನ್ನು ಹಿಡಿದು ಅದನ್ನು ಹೊರಗಡೆ ಎಳೆದುಕೊಂಡು ಬಂದಿದ್ದಾರೆ. ಆದರೆ, ಹೊಟ್ಟೆ ಬಿರಿಯುವಷ್ಟು ಆಹಾರ ಸೇವಿಸಿರುವ ಹಾವಿಗೆ ಹೊರಬರುವ ಮನಸ್ಸಿಲ್ಲ.

ರಜಾಖ್ ಅದನ್ನು ಹೊರಗಡೆ ಎಳೆದು ತರುವಲ್ಲಿ ಕೊನೆಗೂ ಸಫಲರಾಗುತ್ತಾರೆ. ಅವರು ಮತ್ತು ಬೇರೆ 3-4 ಜನ ಸೇರಿ ಅದನ್ನು ಹಿಡಿದಾಗಲೇ ಅದರ ಗಾತ್ರದ ಬಗ್ಗೆ ಗೊತ್ತಾಗುತ್ತದೆ. ಅದೊಂದು 12-13 ವರ್ಷ ವಯಸ್ಸಿನ ಹೆಣ್ಣು ಹಾವು ಎಂದು ರಜಾಖ್ ಹೇಳುತ್ತಾರೆ.
ನಂತರ ಅವರು ಗೋಣಿಚೀಲವೊಂದರಲ್ಲಿ ತೂರಿಸಿ ಸ್ಥಳೀಯರ ನೆರವಿನಿಂದ ಕಾಡಿಗೆ ಒಯ್ದು ಬಿಡುತ್ತಾರೆ. ಅಲ್ಲಿಗೆ ಆಪರೇಷನ್ ಹೆಬ್ಬಾವು ಸಕ್ಸಸ್ಫುಲ್ ಆಗಿ ಕೊನೆಗೊಳ್ಳುತ್ತದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *