ಇತ್ತೀಚಿನ ದಿನಗಳಲ್ಲಿ ಯಾರೇ ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್​ ಕಳೆದುಕೊಂಡರೆ ಮತ್ತೆ ವಾಪಸ್​ ಪಡೆಯುವುದು ಅಥವಾ ಸಿಗುವುದು ಕಷ್ಟಸಾಧ್ಯ. ಆದರೆ ಮೊಬೈಲ್​ ಕಳೆದುಕೊಂಡ ತಿಂಗಳುಗಳ ಬಳಿಕ ಟ್ಯಾಕ್ಸಿ ಡ್ರೈವರ್ ಒಬ್ಬರ ಪ್ರಮಾಣಿಕತೆಯಿಂದ ಯುವತಿಯೊಬ್ಬರು ತಮ್ಮ ಫೋನ್​ ವಾಪಸ್​​ ಪಡೆದುಕೊಂಡಿರುವ ಘಟನೆ ಲಂಡನ್​ನಲ್ಲಿ ನಡೆದಿದೆ.

ಲಂಡನ್​​ನ ಶಾಯ್ ಸಾಡೆ ಎಂಬ ಮಹಿಳೆ ಕಳೆದ 2020ರ ಆಗಸ್ಟ್​​ನಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವೇಳೆ ತಮ್ಮ ಮೊಬೈಲ್​​ ಮರೆತುಹೋಗಿದ್ದರು. ಕ್ಯಾಬ್​​ನಲ್ಲಿ ಮೊಬೈಲ್​​ ಇರುವುದನ್ನ ಡ್ರೈವರ್​ ನೋಡಿದ್ದಾರೆ. ಆದರೆ ಮೊಬೈಲ್​ ಆಫ್​ ಆಗಿದ್ದ ಕಾರಣ ಅದನ್ನು ವಾಪಸ್​ ನೀಡಲು ಬೇರೆ ದಾರಿ ಇಲ್ಲದೇ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಮತ್ತೆ ಯುವತಿ ತಮ್ಮ ಕ್ಯಾಬ್​ ಹತ್ತಿದರೆ ಅಥವಾ ಅವರನ್ನು ಮರಳಿ ಕಂಡರೆ ಮೊಬೈಲ್ ವಾಪಸ್ ನೀಡುವುದು ಡ್ರೈವರ್ ಉದ್ದೇಶವಾಗಿತ್ತು.

ಈ ನಡುವೆ ಶಾಯ್ ಸಾಡೆ ಏಪ್ರಿಲ್ 30 ರಂದು ಕ್ಯಾಬ್​ ಬುಕ್​ ಮಾಡಿದ ವೇಳೆ, ಆಕೆಯನ್ನು ಗುರಿತಿಸಿದ ಡ್ರೈವರ್ ಮೊಬೈಲ್​ ವಾಪಸ್ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುವತಿ, ಮಾನವೀಯತೆ ಮೇಲಿರುವ ನಂಬಿಕೆ ಮತ್ತೆ ಗಟ್ಟಿಯಾಗಿದೆ. ನನ್ನ ಮೊಬೈಲ್​ ಎಲ್ಲಿ ಕಳೆದು ಹೋಗಿತ್ತು ಎಂಬ ನೆನಪೇ ಇರಲಿಲ್ಲ. ಆದ್ದರಿಂದ ನಾನು ಟ್ಯಾಕ್ಸಿ ನಂಬರ್ ಪಡೆಯುವ ಕೆಲಸ ಮಾಡಲಿಲ್ಲ. ಈ ಹಿಂದೆಯೂ ನಾನು ಕೆಲ ವಸ್ತುಗಳನ್ನು ಕಳೆದುಕೊಂಡಿದ್ದರು ಈ ರೀತಿ ಯಾರೂ ನನಗೆ ವಾಪಸ್​ ಕೊಟ್ಟಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ಘಟನೆಯ ವಿವರಗಳನ್ನು ನೀಡಿದ್ದಾರೆ.

The post ಕಾರಿನಲ್ಲಿ ಯುವತಿ ಬಿಟ್ಟು ಹೋಗಿದ್ದ ಐಫೋನ್​​ 8 ತಿಂಗಳ ಬಳಿಕ ಹಿಂದಿರುಗಿಸಿದ ಟ್ಯಾಕ್ಸಿ ಡ್ರೈವರ್ appeared first on News First Kannada.

Source: newsfirstlive.com

Source link