ಕಾರಿನ ಬಾನೆಟ್ ಮೇಲೆ ಆಯಿಲ್ ಸುರಿದು ಅದರ ಮಾಲೀಕನ ಗಮನ ಅದರತ್ತ ಸೆಳೆದ ಕಳ್ಳರು 18 ಲಕ್ಷ ರೂ. ಹಾರಿಸಿಕೊಂಡು ಪರಾರಿಯಾದರು! | Gang of 3 robbers flee away with Rs. 18 lakhs after pouring oil on car and diverting attention of a businessmanಸಿದ್ದರಾಮರ ಕಾರಿನ ಬಾನೆಟ್ ಮೇಲೆ ಆಯಿಲ್ ಸುರಿದು ಅವರ ಗಮನ ಅದರೆಡೆ ಸೆಳೆದ ಮೂವರು ಕಳ್ಳರ ಗ್ಯಾಂಗ್ ಹಣ ಲಪಟಾಯಿಸಿ ಪರಾರಿಯಾಗಿದೆ. ಪ್ರಕಾರಣ ದಾಖಲಿಸಿಕೊಂಡಿರುವ ಚಡಚಣ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

TV9kannada Web Team


| Edited By: Arun Belly

Aug 17, 2022 | 4:21 PM
ವಿಜಯಪುರ: ಒಳ್ಳೆಯವರಿಗೆ ಒಂದೇ ದಾರಿಯಾದರೆ ಕಳ್ಳರಿಗೆ ನೂರೆಂಟು ದಾರಿ ಅಂತ ಗಾದೆಯನ್ನು ಬದಲಾಯಿಸಬಹುದೇನೋ ಅನಿಸುತ್ತೆ ಮಾರಾಯ್ರೇ. ಏನಾಗಿದೆ ಗೊತ್ತಾ? ವಿಜಯಪುರದ ಚಡಚಣದಲ್ಲಿ (Chadchan) ವೃತ್ತಿಯಿಂದ ವ್ಯಾಪಾರಿಯಾಗಿರುವ ಸಿದ್ದರಾಮ ಕಾಪ್ಸೆ (Siddarama Kapse) ಎನ್ನುವರು ಕಳ್ಳರ ಚಾಲಾಕಿತನಕ್ಕೆ ಆಗಷ್ಟೇ ಬ್ಯಾಂಕ್ ನಿಂದ ವಿತ್ ಡ್ರಾ ಮಾಡಿದ್ದ 18 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ. ಸಿದ್ದರಾಮರ ಕಾರಿನ ಬಾನೆಟ್ ಮೇಲೆ ಆಯಿಲ್ ಸುರಿದು ಅವರ ಗಮನ ಅದರೆಡೆ ಸೆಳೆದ ಮೂವರು ಕಳ್ಳರ ಗ್ಯಾಂಗ್ ಹಣ ಲಪಟಾಯಿಸಿ ಪರಾರಿಯಾಗಿದೆ. ಪ್ರಕಾರಣ ದಾಖಲಿಸಿಕೊಂಡಿರುವ ಚಡಚಣ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

TV9 Kannada


Leave a Reply

Your email address will not be published.