ಹಾಸನ: ಕಾರಿನ ಮೇಲೆ‌ ಒಂಟಿಸಲಗವೊಂದು ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ತಾ.ಪಂ. ಮಾಜಿ ಸದಸ್ಯೆ ಚೈತ್ರಾ ಆನೆ ದಾಳಿಯಿಂದ ಪಾರಾದವರು. ತನ್ನ ಮಗನ ಜೊತೆ ಚೈತ್ರಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ‌ ನಡೆಸಿತು ಎನ್ನಲಾಗಿದೆ. ಆಗ ಚೈತ್ರಾ ಹಾಗೂ ಅವರ ಪುತ್ರ ಕಾರಿನಿಂದ ಇಳಿದು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಚೈತ್ರಾರಿಗೆ ಸಣ್ಣಪುಟ್ಟ ಗಾಯವಾಗಿದೆ.

ಆನೆ ದಾಳಿಯಿಂದ  ಕಾರು ಜಖಂ ಆದ ಹಿನ್ನೆಲೆ , ಚೈತ್ರಾ ಬೇರೆ ಕಾರಿನಲ್ಲಿ‌ ಬೆಂಗಳೂರಿಗೆ ತೆರಳಿದರು ಅಂತ ತಿಳಿದುಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

The post ಕಾರಿನ ಮೇಲೆ‌ ಆನೆ ದಾಳಿ.. ಓಡಿ ಜೀವ ಉಳಿಸಿಕೊಂಡ ತಾ.ಪಂ ಮಾಜಿ ಸದಸ್ಯೆ & ಮಗ appeared first on News First Kannada.

Source: newsfirstlive.com

Source link