ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿಬಿದ್ದು ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ಈ ವಿರಳ ಘಟನೆ ನಡೆದಿದೆ.

ಕಾರಿನ ಮೇಲೆ ಉರುಳಿಬಿದ್ದ ಹಳೆಯ ಮರ: ಇಬ್ಬರು ಸ್ಥಳದಲ್ಲೇ ದಾರುಣ ಸಾವು
ಚಾಮರಾಜನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿಬಿದ್ದು (tree fall) ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ (chamarajanagar) ತಾಲೂಕು ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ಈ ವಿರಳ ಘಟನೆ ನಡೆದಿದೆ. ಕುದೇರು ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ ಒಮ್ನಿ ಕಾರಿನ (maruti omni car) ಮೇಲೆಯೇ ಹಳೆಯ ಮರ ಉರುಳಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಮಗನ ಮೇಲೆ ಚಿರತೆ ದಾಳಿ; ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವು
ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಕೆ.ಹೆಚ್.ಖನಗಾವಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಾಂತಾ ಮಿರಜಕರ್(65) ಮೃತ ದುರ್ದೈವಿ. ಕಟ್ಟಡ ಕಾರ್ಮಿಕ ಜಾಧವ್ನಗರದಲ್ಲಿ ಸಿದ್ದರಾಯಿ ಮಿರಜಕರ್ ಎಂಬುವರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗಾಯಗೊಂಡ ಸಿದ್ದರಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುತ್ತಿದ್ದರು. ಈ ವೇಳೆ ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವು
ಯಾದಗಿರಿ: ದೇವಸ್ಥಾನದ ಮುಂಭಾಗದ ಕಲ್ಲಿನ ಕಂಬ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗೂರು ಗ್ರಾಮದಲ್ಲಿ ನಡೆದಿದೆ. ಉಳ್ಳೇಸುಗೂರು ಗ್ರಾಮದಲ್ಲಿ ದೇವಪ್ಪ(40) ಮೃತ ದುರ್ದೈವಿ.
ಶ್ರಾವಣ ಮಾಸ ಹಿನ್ನೆಲೆ ಪ್ರತಿ ದಿನ ಗ್ರಾಮದ ಆಂಜನೇಯ ದೇಗುಲದ ಮುಂದೆ ಭಜನೆ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಬಜನೆ ಮಾಡುವಾಗ ದೇವಪ್ಪ ಮೈಮೇಲೆ ಕಲ್ಲಿನ ಕಂಬ ಬಿದ್ದಿದೆ. ಪರಿಣಾಮ ದೇವಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.