ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ಬಡಜನರಿಗೆ ಸಹಾಯಹಸ್ತ ಚಾಚಿದ್ದ  ನಟ ಸಂಚಾರಿ ವಿಜಯ್ ಅವರ ಕಾರ್ಯವನ್ನು ಹಿರಿಯ ನಟ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ., ವಿಜಯ್​ ತಮ್ಮ ಕಾರನ್ನೇ ಮಾರಾಟ ಮಾಡಿ ಬಡ ಜನರಿಗೆ ನೆರವು ನೀಡಲು ಮುಂದಾಗಿದ್ದರು ಎಂದು ತಿಳಿಸಿದ್ದಾರೆ.

ನಿನ್ನೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್​, ವಿಜಯ್ ಬಳಿ ಒಂದು ಕಾರಿದೆ. ಅದಕ್ಕೆ ತಿಂಗಳಿಗೆ 28 ಸಾವಿರ ರೂಪಾಯಿ ಇಎಂಐ ಕಟ್ಟಬೇಕು. ಇಎಂಐ ಕಟ್ಟದಿದ್ದರೆ ಕಾರು ತೆಗೆದುಕೊಂಡು ಹೋಗುತ್ತಾರೆ ಎಂಬ ಪ್ರಶ್ನೆ ಬಂದಾಗ ಆತ ಕಾರನ್ನೇ ಮಾರಾಟ ಮಾಡಿ ಬಂದ ಹಣದಿಂದ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಮುಂದಾಗಿದ್ದ.

ವಿಜಯ್ ತನ್ನ ಸಹೋದರನಿಗೆ ಕಾರು ಮಾರಾಟ ಮಾಡಲು ಹೇಳಿದ್ದ. ಇದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆ ಹೃದಯಕ್ಕೆ ಎಷ್ಟೊಂದು ವೈಶಾಲ್ಯತೆ ಇದೆ ಎಂದು. ನನಗೆ ಆತನ ಬಗ್ಗೆ ತುಂಬಾ ಹೆಮ್ಮೆ ಆಯ್ತು. ಆದರೆ ಇಎಂಐ ಕಟ್ಟಲಾಗದೆ ಕಾರನ್ನೇ ಮಾರಾಟ ಮಾಡಬೇಕು ಎಂದಾದರೆ, ಕನ್ನಡದ ನೆಲದಲ್ಲಿ ಕಲಾವಿದರಿಗೆ ಎಂತಹ ದುಸ್ಥಿತಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೇ ಮೀಸೆ ತಿರುವಿಕೊಂಡು ಓಡಾಡುವ ನಾವೆಲ್ಲ ಎಂತಹ ಸ್ಥಿತಿ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಗೂಗಲ್​ ಕೂಡ ನಮ್ಮನ್ನು ಬೈಯುವಂತೆ ಆಯ್ತು ಎಂದರು.

The post ‘ಕಾರಿನ EMI ಕಟ್ಟೋದು ಬೇಡ ಬಡವರಿಗೆ ಸಹಾಯ ಮಾಡೋಣ ಎಂದಿದ್ರು ವಿಜಯ್’- ನಟ ಜಗ್ಗೇಶ್ appeared first on News First Kannada.

Source: newsfirstlive.com

Source link