ಕಾರ್ಬೋಹೈಡ್ರೇಟ್‌ಗಳು – ಆಲೂಗಡ್ಡೆಯಲ್ಲಿ ಹೆಚ್ಚಾಗಿರುತ್ತದಾ, ಬ್ರೆಡ್​​ನಲ್ಲಿ ಹೆಚ್ಚು ಇರುತ್ತದಾ?​ – Carbohydrates if you want to keep gut healthy, do not remove carbohydrates completely from your diet consuming potatoes Preferred


ಆಲೂಗಡ್ಡೆ ಸೇವಿಸುವ ಮೂಲಕ ಸಂಸ್ಕರಿಸಿದ ಬ್ರೆಡ್‌ನಲ್ಲಿ ಸೇರಿಸಲಾದ ಸೋಡಿಯಂ ಅನ್ನು ಪಡೆಯುವುದಿಲ್ಲ. ದೇಹ ತೂಕ ಹೆಚ್ಚಳಕ್ಕೆ ಇದು ಕಾರಣವಾಗಿದೆ. ಆದ್ದರಿಂದ, ನೀವು ಕರುಳನ್ನು ಆರೋಗ್ಯಕರವಾಗಿಡಲು ಬಯಸಿದ್ದೇ ಆದರೆ, ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ನಿಲ್ಲಿಸಬೇಡಿ.

ಕಾರ್ಬೋಹೈಡ್ರೇಟ್‌ಗಳು - ಆಲೂಗಡ್ಡೆಯಲ್ಲಿ ಹೆಚ್ಚಾಗಿರುತ್ತದಾ, ಬ್ರೆಡ್​​ನಲ್ಲಿ ಹೆಚ್ಚು ಇರುತ್ತದಾ?​

ಕಾರ್ಬೋಹೈಡ್ರೇಟ್‌ಗಳ ಲೆಕ್ಕಚಾರದಲ್ಲಿ ಆಲೂ ವರ್ಸಸ್ ಬ್ರೆಡ್ ಸೇವನೆಯ ಪರಿಣಾಮ ಏನು?

ಕಾರ್ಬೋಹೈಡ್ರೇಟ್‌ಗಳು (Carbohydrates) ಅಂದರೆ ಹಣ್ಣುಗಳು, ಧಾನ್ಯಗಳು, ತರಕಾರಿಗಳು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕಂಡುಬರುವ ಸಕ್ಕರೆಗಳು, ಪಿಷ್ಟಗಳು ಮತ್ತು ಫೈಬರ್‌ಗಳು. ಕಾರ್ಬೋಹೈಡ್ರೇಟ್‌ಗಳು ಮ್ಯಾಕ್ರೋನ್ಯೂಟ್ರಿಯೆಂಟ್‌ಗಳಾಗಿವೆ. ಅಂದರೆ ದೇಹವು ಶಕ್ತಿ ಅಥವಾ ಕ್ಯಾಲೊರಿಗಳನ್ನು ಪಡೆಯುವ ಮೂರು ಪ್ರಮುಖ ವಿಧಾನಗಳಲ್ಲಿ ಒಂದಾಗಿದೆ. ಕಾರ್ಬೋಹೈಡ್ರೇಟ್‌ಗಳು ದೇಹದ ಶಕ್ತಿಯ ಮುಖ್ಯ ಮೂಲವಾಗಿದೆ. ರಾಸಾಯನಿಕ ಮಟ್ಟದಲ್ಲಿ ಅವು ಇಂಗಾಲ, ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಹೊಂದಿರುತ್ತವೆ (Health Tips).

ಕಾರ್ಬೋಹೈಡ್ರೇಟ್‌ಗಳು ನಿಮ್ಮ ದೇಹಕ್ಕೆ ಏನು ಮಾಡುತ್ತವೆ?

ಕಾರ್ಬೋಹೈಡ್ರೇಟ್‌ಗಳು ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯ ಮುಖ್ಯ ಮೂಲವಾಗಿದೆ: ಅದು ನಿಮ್ಮ ಮೆದುಳು, ಮೂತ್ರಪಿಂಡಗಳು, ಹೃದಯ ಸ್ನಾಯುಗಳು ಮತ್ತು ಕೇಂದ್ರ ನರಮಂಡಲವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ಫೈಬರ್ ಎಂಬುದು ಕಾರ್ಬೋಹೈಡ್ರೇಟ್ ಆಗಿದ್ದು ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ನೀವು ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸದಿದ್ದರೆ ಏನಾಗುತ್ತದೆ?

ನೀವು ಅಗತ್ಯವಿರುವಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಪಡೆಯದಿದ್ದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯ ಶ್ರೇಣಿಗಿಂತ (70-99 mg/dL) ಕೆಳಗೆ ಇಳಿಯಬಹುದು. ಇದು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗುತ್ತದೆ. ನಿಮ್ಮ ದೇಹವು ಶಕ್ತಿಗಾಗಿ ಕೊಬ್ಬನ್ನು ಕರಗಿಸಲು ಪ್ರಾರಂಭಿಸುತ್ತದೆ. ಇದು ಕೀಟೋಸಿಸ್​ ಗೆ ಕಾರಣವಾಗುತ್ತದೆ.

ನೀವು ಒಂದು ತಿಂಗಳ ಕಾಲ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸದಿದ್ದರೆ ಏನಾಗುತ್ತದೆ?

ತೀವ್ರವಾಗಿ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ನಿರ್ಬಂಧಿಸಿದರೆ ನಿಮ್ಮ ದೇಹವು ಕೊಬ್ಬನ್ನೇ ಶಕ್ತಿಗಾಗಿ ಕೀಟೋನ್‌ಗಳಾಗಿ ವಿಭಜಿಸಲು ಕಾರಣವಾಗಬಹುದು. ಇದನ್ನು ಕೆಟೋಸಿಸ್ ಎಂದು ಕರೆಯಲಾಗುತ್ತದೆ. ಕೆಟೋಸಿಸ್ ಕೆಟ್ಟ ಉಸಿರಾಟ, ತಲೆನೋವು, ಆಯಾಸ ಮತ್ತು ದೌರ್ಬಲ್ಯದಂತಹ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.

ಮೇಲಿನ ಕಾರ್ಬೋಹೈಡ್ರೇಟ್‌ಗಳ ಲೆಕ್ಕಚಾರದಲ್ಲಿ ಆಲೂ ವರ್ಸಸ್ ಬ್ರೆಡ್ ಸೇವನೆಯ ಪರಿಣಾಮ ಏನು?

ಬಹಳಷ್ಟು ಫಿಟ್ನೆಸ್ ತಜ್ಞರು ದೇಹ ತೂಕದ ಪರಿವೀಕ್ಷಕರು ಮತ್ತು ಜಿಮ್ ತರಬೇತುದಾರರು ಕಾರ್ಬೋಹೈಡ್ರೇಟ್‌ಗಳು ಅನಾರೋಗ್ಯಕರವೆಂದು ಸಲಹೆ ನೀಡುತ್ತಾರೆ. ಏನೇ ಆದರೂ ಅವುಗಳನ್ನು ನೀವು ತಪ್ಪಿಸಬೇಕು! ಎನ್ನುತ್ತಾರೆ. ಹಾಗಾದರೆ ತಿನ್ನೋದು ಏನು ಅಂತಾ ಕೇಳಿದರೆ ಅದೇ ಉಸಿರಿನಲ್ಲಿ ಬ್ರೌನ್ ಬ್ರೆಡ್ ಸ್ಯಾಂಡ್‌ವಿಚ್, ಮಲ್ಟಿಗ್ರೇನ್ ಬ್ರೆಡ್ (Bread) ಇತ್ಯಾದಿಗಳನ್ನು ಸೇವಿಸುವಂತೆ ಸಲೀಸಾಗಿ ಹೇಳಿಬಿಡುತ್ತಾರೆ.

ಮೊದಲಿಗೆ, ಒಂದನ್ನು ಸ್ಪಷ್ಟಪಡಿಸೋಣ- ಕಾರ್ಬೋಹೈಡ್ರೇಟ್‌ಗಳು ನಿಮಗೆ ಕೆಟ್ಟದ್ದಲ್ಲ ಮತ್ತು ನಿರೋಧಕ ಪಿಷ್ಟವೂ ಅಲ್ಲ. ವಾಸ್ತವವಾಗಿ, ಸಂಸ್ಕರಿಸಿದ ಪಿಷ್ಟವು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಏಕೆಂದರೆ ಅದು ದೇಹದಲ್ಲಿ ನಿಧಾನವಾಗಿ ಹೀರಲ್ಪಡುತ್ತದೆ. ಆದ್ದರಿಂದ ಅದು ಅನಗತ್ಯ ಹಸಿವಿನ ಭಾದೆಯಿಂದ ನಿಮ್ಮನ್ನು ಉಳಿಸುತ್ತದೆ.

ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸದಿದ್ದರೆ ಹೊಟ್ಟೆ ಉಬ್ಬುವುದು ಪ್ರಾರಂಭದ ಹಂತವಾಗಿದೆ. ಆದ್ದರಿಂದ, ನೀವು ನಿರೋಧಕ ಪಿಷ್ಟವನ್ನು ಸಂಪೂರ್ಣವಾಗಿ ಕಡಿತಗೊಳಿಸಿದರೆ, ನಿಮ್ಮ ಕರುಳು ತೊಂದರೆಗೊಳಗಾಗುವ ಸಾಧ್ಯತೆಯಿದೆ. ಏಕೆಂದರೆ ಕರುಳಿನ ಬ್ಯಾಕ್ಟೀರಿಯಾವನ್ನು ತಿನ್ನುವ ಯಾವುದೇ ಆಹಾರವಿಲ್ಲ. ಆದ್ದರಿಂದ ನೀವು ಮಿತವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವತ್ತ ಗಮನಹರಿಸಬೇಕು. ಗಮನಿಸಿ – 100 ಗ್ರಾಂ ಬ್ರೌನ್ ಬ್ರೆಡ್ ನಿಮಗೆ 43 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ನೀಡುತ್ತದೆ. ಅದೇ ಪ್ರಮಾಣದಲ್ಲಿ ಆಲೂಗಡ್ಡೆಯು 21 ಗ್ರಾಂ ಕಾರ್ಬೋಹೈಡ್ರೇಟ್ಗಳನ್ನು ನೀಡುತ್ತದೆ. ಹಾಗಾಗಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟಿದೆ.

ಕೊಬ್ಬು ಮತ್ತು ಸಕ್ಕರೆ ಅಂಶದಲ್ಲೂ ಈ ಹೋಲಿಕೆ ಹೀಗಿದೆ: 100 ಗ್ರಾಂ ಬ್ರೌನ್ ಬ್ರೆಡ್ 4.3 ಗ್ರಾಂ ಸಕ್ಕರೆ ಮತ್ತು 3.5 ಗ್ರಾಂ ಕೊಬ್ಬನ್ನು ಒದಗಿಸುತ್ತದೆ. ಮತ್ತೊಂದೆಡೆ, 100 ಗ್ರಾಂ ಆಲೂಗಡ್ಡೆ 1.2 ಗ್ರಾಂ ಸಕ್ಕರೆ ಅಂಶವನ್ನು ನೀಡುತ್ತದೆ (ಅರ್ಧಕ್ಕಿಂತ ಕಡಿಮೆ). ಮತ್ತು ಬಹುತೇಕ ಅತ್ಯಲ್ಪ ಪ್ರಮಾಣದ ಕೊಬ್ಬನ್ನು ಅಂದರೆ 0.1 ಗ್ರಾಂ ನೀಡುತ್ತದೆ!

ನಾವು ಇನ್ನೂ ಕೆಲವು ನಿಯತಾಂಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಆಲೂಗಡ್ಡೆಯನ್ನು ಸೇವಿಸುವ ಮೂಲಕ ನೀವು ಸಂಸ್ಕರಿಸಿದ ಬ್ರೆಡ್‌ನಲ್ಲಿ ಸೇರಿಸಲಾದ ಸೋಡಿಯಂ ಅನ್ನು ಪಡೆಯುವುದಿಲ್ಲ. ದೇಹ ತೂಕ ಹೆಚ್ಚಳಕ್ಕೆ ಇದು ಕಾರಣವಾಗಿದೆ. ಆದ್ದರಿಂದ, ನೀವು ಕರುಳನ್ನು ಆರೋಗ್ಯಕರವಾಗಿಡಲು ಬಯಸಿದ್ದೇ ಆದರೆ, ನಿಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ. ಆಲೂಗಡ್ಡೆಯಂತಹ ನೈಸರ್ಗಿಕ ಮೂಲಗಳಿಂದ ಅವುಗಳನ್ನು ಸೇವಿಸಲು ಆದ್ಯತೆ ನೀಡಿ!

ತಾಜಾ ಸುದ್ದಿ

TV9 Kannada


Leave a Reply

Your email address will not be published.