ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ | Is it a government program or a party program DK Suresh slams officers for bjp flex in bengaluru


ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ

ಸಂಸದ ಡಿಕೆ ಸುರೇಶ (ಸಂಗ್ರಹ ಚಿತ್ರ)

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು.

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ನಾಯಕರು ಭಾಗಿಯಾಗಿದ್ದು ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ‌ ನಾಯಕರ ಫೋಟೋ ಬಳಕೆ ಮಾಡಿದಕ್ಕೆ ಡಿ.ಕೆ.ಸುರೇಶ್(DK Suresh) ಗರಂ ಆಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಎಲ್ಲಾ ಕಡೆಗೂ ಬಿಜೆಪಿ ಬಾವುಟ, BJP ನಾಯಕರ ಫೋಟೋ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರ ಫೋಟೋ ಕೂಡ ಹಾಕಬಹುದಿತ್ತು. ಸರ್ಕಾರಿ‌ ಕಾರ್ಯಕ್ರಮದಲ್ಲಿ ಫೋಟೋ‌ ಬಳಕೆ ಸರಿಯಲ್ಲ. ಇದು ಎರಡನೇ ಬಾರಿ ಹೇಳ್ತಿದ್ದೇನೆ ಎಂದು ಡಿ.ಕೆ.ಸುರೇಶ್ ಕಿಡಿ ಕಾರಿದ್ದಾರೆ. ಇನ್ಮುಂದೆ ಇದನ್ನ ಸರಿಪಡಿಸುವ ಕೆಲಸ ಸಿಎಂ ಬೊಮ್ಮಾಯಿ ಮಾಡ್ತಾರೆ ಅಂದುಕೊಂಡಿದ್ದೇನೆ ಅಂತಾ ಹೇಳುವ ಮೂಲಕ ಡಿ.ಕೆ.ಸುರೇಶ್ ಭಾಷಣ ಮುಗಿಸಿದ್ದಾರೆ.

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು.

TV9 Kannada


Leave a Reply

Your email address will not be published.