ಕಾರ್​-ಟ್ರಕ್ ನಡುವೆ ಭೀಕರ ಅಪಘಾತ: ಮಗು ಸೇರಿ ಒಂದೇ ಕುಟುಂಬದ 10 ಮಂದಿ ದುರ್ಮರಣ

ಕಾರ್​-ಟ್ರಕ್ ನಡುವೆ ಭೀಕರ ಅಪಘಾತ: ಮಗು ಸೇರಿ ಒಂದೇ ಕುಟುಂಬದ 10 ಮಂದಿ ದುರ್ಮರಣ

ಗುಜರಾತ್:  ಕಾರ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದು ಮಗು ಸೇರಿ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಗುಜರಾತ್​​ನ ಆನಂದ್ ಜಿಲ್ಲೆಯ ಇಂದ್ರನಾಜ್ ಎಂಬ ಗ್ರಾಮದಲ್ಲಿ ನಡೆದಿದೆ.

ಆನಂದ್ ಜಿಲ್ಲೆಯ ತಾರಾಪುರ್ ಮತ್ತು ಅಹ್ಮದಾಬಾದ್​ನ ವತಮಾನ್​ ನಡುವೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಒಂದು ಮಗು ಸೇರಿದಂತೆ ಒಂದೇ ಕುಟುಂಬದ 10 ಮಂದಿ ಕಾರ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಕಾರ್​ಗೆ ಗುದ್ದಿದ ಹಿನ್ನೆಲೆ  ಎಲ್ಲಾ 10 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಎಲ್ಲ ಮೃತದೇಹಗಳನ್ನ ಕಾರ್​ನಿಂದ ಹೊರತೆಗೆಯಲಾಗಿದ್ದು ಮೃತರ  ಗುರುತುಪತ್ತೆಹಚ್ಚಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

The post ಕಾರ್​-ಟ್ರಕ್ ನಡುವೆ ಭೀಕರ ಅಪಘಾತ: ಮಗು ಸೇರಿ ಒಂದೇ ಕುಟುಂಬದ 10 ಮಂದಿ ದುರ್ಮರಣ appeared first on News First Kannada.

Source: newsfirstlive.com

Source link