ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಕಾಡು ಹಂದಿಯ ಸ್ಪೀಡ್ ನೋಡಿ! | Pig try to attack on pig in car Show Room at Mangalore


ಕಾರ್ ಷೋರೂಂ ಆವರಣದೊಳಗೆ ಕಾಡು ಹಂದಿಯೊಂದು ನುಗ್ಗಿದೆ. ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಹಂದಿ ಷೋರೂಂ ಸಿಬ್ಬಂದಿ ಮೇಲೆ ತಿವಿಯಲು ಯತ್ನಿಸಿದೆ. ಮಂಗಳೂರಿನ ಪಡೀಲ್​ನ ಕಾರ್ ಷೋರೂಂನಲ್ಲಿ ನವೆಂಬರ್ 24 ರಂದು ಈ ಘಟನೆ ನಡೆದಿದೆ. ಕಾಡು ಹಂದಿ ನುಗ್ಗುವ ದೃಶ್ಯ ಲಭ್ಯವಾಗಿದ್ದು, ದೃಶ್ಯ ಭಯ ಹುಟ್ಟಿಸುತ್ತದೆ. ಕಾಡು ಹಂದಿ ಷೋರೂಂ ಸಿಬ್ಬಂದಿಯನ್ನು ಬೆನ್ನಟ್ಟಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ. ಬಲಿಷ್ಠವಾಗಿರುವ ಕಾಡು ಹಂದಿ ಇದಕ್ಕಿದ್ದಂತೆ ಆವರಣದೊಳಗೆ ಬಂದಿದೆ. ಷೋರೂಂ ಪಕ್ಕದಲ್ಲಿ ಬೈಕ್​ಗಳು ಮತ್ತು ಕಾರುಗಳು ನಿಂತಿದ್ದವು. ಆದರೆ ಹಂದಿ ವಾಹನಗಳ ಬಳಿ ಹೋಗದೆ ನೇರವಾಗಿ ಷೋರೂಂ ಸಿಬ್ಬಂದಿಗೆ ಗುದ್ದಲು ಮುಂದಾಗಿದೆ. ಹಂದಿ ವೇಗವಾಗಿ ಬರುತ್ತಿದ್ದಂತೆ ವ್ಯಕ್ತಿ ಓಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಹಂದಿ ವ್ಯಕ್ತಿ ಬಳಿಯಿಂದ ಮುಂದೆ ಓಡುತ್ತದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

TV9 Kannada


Leave a Reply

Your email address will not be published. Required fields are marked *