ಕಾರ ಹುಣ್ಣಿಮೆ ಹಿನ್ನೆಲೆ ಯಾದಗಿರಿಯಲ್ಲೊಂದು ವಿಶೇಷ ಆಚರಣೆ; ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು | Kara hunnime celebration yadgir people celebrate festival with unique marrying children


ಕಾರ ಹುಣ್ಣಿಮೆ ಹಿನ್ನೆಲೆ ಯಾದಗಿರಿಯಲ್ಲೊಂದು ವಿಶೇಷ ಆಚರಣೆ; ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು

ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು

ಸಸಿ ಆಡಿದ ನಂತರ ಮಕ್ಕಳ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳಾಗುತ್ತದೆ. ನಿಜವಾದ ವಿವಾಹ ಮಾಡುವಾಗ ಯಾವ ರೀತಿ‌ ಸಂಪ್ರದಾಯಗಳನ್ನ ಪಾಲನೆ ಮಾಡುತ್ತಾರೋ ಅದೇ ರೀತಿ ಎಲ್ಲಾ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ.

ಯಾದಗಿರಿ: ಜಿಲ್ಲೆಯ ಅದೊಂದು ಗ್ರಾಮದಲ್ಲಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಮಕ್ಕಳ ಮದುವೆ(Child Marriage) ಅದ್ದೂರಿಯಾಗಿ ಮಾಡಲಾಯಿತು. ಬಾಲ್ಯ ವಿವಾಹ ನಿಷೇಧವಿದ್ದರು ಮಕ್ಕಳ ಮದುವೆ ಹೇಗೆ ಮಾಡಲಾಯಿತು ಎಂದು ಶಾಕ್ ಆಗಬೇಡಿ. ಆ ಗ್ರಾಮದಲ್ಲಿ ನಡೆದಿದ್ದು ನಿಜವಾದ ಮದುವೆ ಅಲ್ಲ ಬದಲಿಗೆ ಸಂಪ್ರದಾಯದಂತೆ ಅಣಕು ಮದುವೆ ವೈಭವದಿಂದ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ(Kara Hunnime) ಮರು ದಿನ ಅಂದರೆ ಕಾರ ಹುಣ್ಣಿಮೆ ಕರಿ ದಿವಸ ಸಸಿ ಹಬ್ಬ ಆಚರಣೆ ಮಾಡುತ್ತಾರೆ. ಸಸಿ ಹಬ್ಬ ಮಕ್ಕಳು ಆಚರಣೆ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಆ ದಿನ ಸಸಿಗಳಿಗೆ ಪೂಜೆ ಮಾಡಲಾಗುತ್ತದೆ ನಂತರ ಬಾವಿ ಇಲ್ಲವೇ ಕೆರೆಯಲ್ಲಿ ಸಸಿಗಳನ್ನು ಬಿಡಲಾಗುತ್ತದೆ.

ಮಕ್ಕಳ ಮದುವೆ ಪೋಷಕರ ಸಂಭ್ರಮ
ಸಸಿ ಆಡಿದ ನಂತರ ಮಕ್ಕಳ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳಾಗುತ್ತದೆ. ನಿಜವಾದ ವಿವಾಹ ಮಾಡುವಾಗ ಯಾವ ರೀತಿ‌ ಸಂಪ್ರದಾಯಗಳನ್ನ ಪಾಲನೆ ಮಾಡುತ್ತಾರೋ ಅದೇ ರೀತಿ ಎಲ್ಲಾ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಒಂದು ಹೆಣ್ಣು ಮಗುವಿಗೆ ವರನ ಉಡುಗೆ ತೊಡಿಸಿ ಮತ್ತೊಂದು ಹೆಣ್ಣು ಮಗುವಿಗೆ ವಧುವಿನ ಅಲಂಕಾರ ಮಾಡಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ವಿವಾಹ ಮಾಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿ ಗ್ರಾಮದಲ್ಲಿ ಇಂತಹದೊಂದು ವಿಶೇಷ ಮದುವೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಮಕ್ಕಳು ಸಸಿ ಹಬ್ಬ ಆಡಿದ ನಂತರ ಅಣಕು ಮದುವೆ ಮಾಡಲಾಯಿತು. ಹೆಗ್ಗಣ್ಣದೊಡ್ಡಿಯ ಹಿರೇಮಠದಲ್ಲಿ ಅಣಕು ಮದುವೆ ಕಾರ್ಯಕ್ರಮ ನಡೆಸಲಾಯಿತು. ಮಂತ್ರ ಘೋಷದೊಂದಿಗೆ ಭಾಜ ಭಜಂತ್ರಿ ವಾದ್ಯಗಳೊಂದಿಗೆ ವಿವಾಹ ಮಾಡಲಾಯಿತು. ಶಾಂತಯ್ಯ ಹಿರೇಮಠ ಅವರು ಅಣಕು ಮದುವೆ ನೇತೃತ್ವ ವಹಿಸಿದ್ದರು. ಅಣಕು ಮದುವೆಯು ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯವಾಗಿದೆ ಅದರಂತೆ ಈ ಗ್ರಾಮದಲ್ಲಿ ಅಣಕು ಮದುವೆ ಮಾಡಲಾಯಿತು.

TV9 Kannada


Leave a Reply

Your email address will not be published.