ಕಾಲಿಗೆ ಬಿದ್ದು ‘ಮಗಳಿಗೆ ಕೆಲಸ ಕೊಡಿಸಿ’ ಎಂದು ಕಣ್ಣೀರಿಟ್ಟ ಮಹಿಳೆಗೆ ಸಿದ್ದರಾಮಯ್ಯ ಹೇಳಿದ್ದೇನು?


ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಮಗಳಿಗೆ ಕೆಲಸ ಕೊಡಿಸಿ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದಾರೆ. ನನ್ನ ಗಂಡ ನಿಮ್ಮ ಸಪೋರ್ಟರ್​​, ಈಗ ಅವರು ಕಾಲವಾಗಿದ್ದಾರೆ. ನಮಗೆ ಬದುಕಲು ಏನಿಲ್ಲ. ಹಾಗಾಗಿ ನನ್ನ ಮಗಳಿಗೊಂದು ಕೆಲಸ ಕೊಡಿಸಿ ಎನ್ನುತ್ತಾ ಗೊಳೋ ಎಂದು ಅತ್ತಿದ್ದಾರೆ.

ಇನ್ನು, ಮಹಿಳೆಗೆ ಬೈದು ಕಾಲು ಬಿಡಮ್ಮ ಎಂದ ಸಿದ್ದರಾಮಯ್ಯ, ಸರಿ ನೋಡ್ತೀನಿ ಇರು ಎಂದರು. ಇಷ್ಟಾದರೂ ಮಹಿಳೆ ಮಾತ್ರ ಸಿದ್ದರಾಮಯ್ಯ ಕಾಲು ಬಿಡಲಿಲ್ಲ. ಆಗ ಗದರಿದ ಸಿದ್ದರಾಮಯ್ಯ, ಹೀಗೆ ಮಾಡಬಾರದು ಎಂದು ಮಹಿಳೆಗೆ ಬೈದರು.

ಎಷ್ಟೇ ಹೇಳಿದರೂ ಮಹಿಳೆ ಮಾತ್ರ ನನ್ನ ಮಗಳಿಗೆ ಕೆಲಸ ಕೊಡಿಸಿ ಎಂದು ಕಣ್ಣೀರಿಟ್ಟರು. ಸರಿ ಆಯ್ತು ಹೇಳ್ತೀನಿ ಎಂದು ಒಂದೇ ಸಮನೇ ಕಣ್ಣೀರಿಟ್ಟ ಮಹಿಳೆಗೆ ಸಿದ್ದರಾಮಯ್ಯ ಆಶ್ವಾಸನೆ ಕೊಟ್ಟರು.

ಇದನ್ನೂ ಓದಿ: ಕಾಲಿಗೆ ಬಿದ್ದು ‘ಮಗಳಿಗೆ ಕೆಲಸ ಕೊಡಿಸಿ’ ಎಂದು ಕಣ್ಣೀರಿಟ್ಟ ಮಹಿಳೆಗೆ ಸಿದ್ದರಾಮಯ್ಯ ಮಾಡಿದ್ದೇನು?

News First Live Kannada


Leave a Reply

Your email address will not be published.