‘ಕಾಲಿಗೆ ಬಿದ್ರೂ ವಾಹನ ವಾಪಸ್​ ಕೊಡಲ್ಲ’ ಖುದ್ದು ಫೀಲ್ಡ್​​ಗೆ ಇಳಿದ ಕಮಿಷನರ್​ ವಾರ್ನಿಂಗ್

‘ಕಾಲಿಗೆ ಬಿದ್ರೂ ವಾಹನ ವಾಪಸ್​ ಕೊಡಲ್ಲ’ ಖುದ್ದು ಫೀಲ್ಡ್​​ಗೆ ಇಳಿದ ಕಮಿಷನರ್​ ವಾರ್ನಿಂಗ್

ಬೆಂಗಳೂರು: ಕೊರೊನಾ ಸೋಂಕಿನ ಸುನಾಮಿಯನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಕೊರೊನಾ ಜನತಾ ಕರ್ಫ್ಯೂ ಜಾರಿ ಮಾಡಿದೆ. ಆದರೆ ಅನಗತ್ಯವಾಗಿ ಸಾಕಷ್ಟು ಮಂದಿ ರಸ್ತೆಗೆ ಇಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಗತ್ಯ ವಾಗಿ ರಸ್ತೆಗೆ ಬಂದವರ ವಿರುದ್ಧ ಬಿಸಿ ಮುಟ್ಟಿಸಲು ಸ್ವತಃ ಬೆಂಗಳೂರು ಪೊಲೀಸ್​ ಕಮಿಷನರ್​ ಕಮಲ್ ಪಂಥ್ ಫೀಲ್ಡ್​ಗೆ ಇಳಿದಿದ್ದಾರೆ.

ಇಂದು ಬೆಳಗ್ಗೆ ನಗರದ ನೃಪತುಂಗ ರಸ್ತೆ ವಾಹನಗಳಿಂದ ಫುಲ್ ಬ್ಲಾಕ್ ಆಗಿತ್ತು. ಈ ವೇಳೆ ಆಗಮಿಸಿದ ಕಮಿಷನರ್ ಅವರು ನಗರದ ಹಡ್ಸನ್ ವೃತ್ತದ ಬಳಿ ವಾಹನ ಪರಿಶೀಲನೆ ನಡೆಸಿದರು.

ಈ ವೇಳೆ ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಕಮಲ್​ ಪಂತ್ ಅವರು, ಅನಗತ್ಯವಾಗಿ ರಸ್ತೆಗಿಳಿಯುತ್ತಿರುವ ವಿರುದ್ಧ ಕ್ರಮ ವಹಿಸಲು ನಮ್ಮ ಪೊಲೀಸರು ಸಾಕಷ್ಟು ಕ್ರಮವಹಿಸುತ್ತಿದ್ದಾರೆ. ಯಾರು ಕೂಡ ಅನಗತ್ಯ ವಾಗಿ ಓಡಾಡಬಾರದು, ಒಂದು ವೇಳೆ ಆ ರೀತಿಯಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅನಗತ್ಯವಾಗಿ ಬಂದಿರುವುದು ಖಚಿತವಾದರೆ ಕಾಲಿಗೆ ಬಿದ್ದರೂ ಸೀಜ್ ಮಾಡಿರುವ ವಾಹನ ವಾಪಸ್​ ಕೊಡಲ್ಲ. ಕೊರೊನ ಕಂಟ್ರೋಲ್ ಮಾಡೋಕೆ ಜನ ಸಹಕಾರ ನೀಡಿ ಎಂದು ಮನವಿ ಮಾಡಿದರು.

The post ‘ಕಾಲಿಗೆ ಬಿದ್ರೂ ವಾಹನ ವಾಪಸ್​ ಕೊಡಲ್ಲ’ ಖುದ್ದು ಫೀಲ್ಡ್​​ಗೆ ಇಳಿದ ಕಮಿಷನರ್​ ವಾರ್ನಿಂಗ್ appeared first on News First Kannada.

Source: newsfirstlive.com

Source link