ಮುಂಬೈ: ಕೊರೊನಾ ಸಂಕಷ್ಟದ ಸಮಯದಿಂದಲೂ ಚಿಕಿತ್ಸೆಗೆ ಹಣ ಇಲ್ಲದವರಿಗೆ ಆರ್ಥಿಕ ನೆರವು ನೀಡುತ್ತಾ ಬಡವರ ಪಾಲಿನ ದೇವರಾಗಿರುವ ಸೋನು ಸೂದ್ ಅವರ ಕಾಲಿಗೆ ಜನ ಬೀಳಲು ಮುಂದಾಗಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸೋನು ಸೂದ್ ಬಳಿ ಕಷ್ಟ ಹೇಳಿಕೊಂಡರೆ ಅದಕ್ಕೆ ಖಂಡಿತ ಪರಿಹಾರ ಸಿಗುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅವರನ್ನು ಜನರು ದೇವರ ರೀತಿ ನೋಡುತ್ತಾರೆ. ತಮಗೆ ಜನಿಸಿದ ಮಕ್ಕಳಿಗೆ ಸೋನು ಸೂದ್ ಎಂದು ಹೆಸರಿಟ್ಟು, ಸೋನು ಅವರಿಗೆ ದೇವಸ್ಥಾನ, ಹಾಲಿನ ಅಭಿಷೇಕ ಹೀಗೆ ಹಲವು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದವರೂ ಇದ್ದಾರೆ.

 

View this post on Instagram

 

A post shared by Viral Bhayani (@viralbhayani)

ಮುಂಬೈನಲ್ಲಿರುವ ಸೋನು ಸೂದ್ ಮನೆಯ ಎದುರು ಇತ್ತೀಚೆಗೆ ಕೆಲವರು ಬಂದು ಸಹಾಯ ಕೇಳಿದ್ದಾರೆ. ತಮ್ಮ ಕಷ್ಟಕ್ಕೆ ಸ್ಪಂದಿಸಿದ ನಟನ ಕಾಲಿಗೆ ಬೀಳಲು ಅವರೆಲ್ಲ ಮುಂದಾಗಿದ್ದಾರೆ. ವಯಸ್ಸಿನಲ್ಲಿ ಹಿರಿಯರಾದವರು ಕೂಡ ಭಾವುಕರಾಗಿ ಸೋನು ಪಾದ ಮುಟ್ಟಿ ನಮಸ್ಕರಿಸಲು ಬಂದಿದ್ದಾರೆ. ಆದರೆ ಅದಕ್ಕೆ ಸೋನು ಅವಕಾಶ ನೀಡಿಲ್ಲ. ವಿನಯವಂತಿಕೆಯಿಂದ ಹಿಂದೆ ಸರಿದು, ಎಲ್ಲರಿಗೂ ಕೈ ಮುಗಿದಿದ್ದಾರೆ.

ಒಂದೆಡೆ ಸೋನು ಸೂದ್ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಸೋನು ಸೂದ್ ಹೆಸರಿನಲ್ಲಿ ಹಣ ಮಾಡಲು ಕೂಡ ಕೆಲವು ಕಿಡಿಗೇಡಿಗಳು ಮುಂದಾಗಿದ್ದಾರೆ. ಸೋನು ಸೂದ್ ಫೌಂಡೇಶನ್‍ಗೆ ಹಣ ದೇಣಿಗೆ ನೀಡಿ ಎಂದು ನಕಲಿ ಗೂಗಲ್ ಪೇ ನಂಬರ್ ಇರುವ ಪೋಸ್ಟರ್​ಗಳು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹರಿದಾಡಿದ್ದವು. ಅವುಗಳ ಸ್ಕ್ರೀನ್ ಶಾಟ್ ಹಂಚಿಕೊಂಡ ಸೋನು ಸೂದ್, ಇದೆಲ್ಲವೂ ಫೇಕ್ ಎಂಬುದನ್ನು ಸ್ಪಷ್ಟಪಡಿಸಿದ್ದರು.

The post ಕಾಲಿಗೆ ಬೀಳಲು ಮುಂದಾದ ಜನ- ಕೈ ಮುಗಿದು ಹಿಂದೆ ಸರಿದ ಸೋನು ಸೂದ್ appeared first on Public TV.

Source: publictv.in

Source link