ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಇದುವರೆಗೆ ಇರದ ಅಕ್ಷೇಪಣೆ ಈಗ ಯಾಕೆ ಅಂತ ಪ್ರಶ್ನಿಸುತ್ತಾರೆ ಮಂಗಳೂರು ವಿದ್ಯಾರ್ಥಿನಿಯರು | Wearing hijab was never an issue in college before, why it is enforced now? Ask Mangaluru students ARBಯಾವುದಾದರೂ ವಿದ್ಯಾರ್ಥಿ ಸಂಘಟನೆಯ ಒತ್ತಡಕ್ಕೆ ಮಣಿದು ಅದನ್ನು ಕಳಿಸಿರುವಿರಾ ಅಂತ ವಿದ್ಯಾರ್ಥಿನಿಯರು ಕೇಳಿದಾಗ ಅವರು ತಮ್ಮ ಮೇಲೆ ಯಾರ ಒತ್ತಡವೂ ಇಲ್ಲವೆಂದು ಹೇಳುತ್ತಾರೆ ಮತ್ತು ವಿದ್ಯಾರ್ಥಿನಿಯರದ್ದು ಯಾವುದೇ ಆಕ್ಷೇಪಣೆ ಇದ್ದರೂ ಅದನ್ನು ಬರವಣಿಗೆಯಲ್ಲಿ ಕೊಡಲು ಆಗ್ರಹಿಸುತ್ತಾರೆ.

TV9kannada Web Team


| Edited By: Arun Belly

Jun 03, 2022 | 8:59 PM
ಮಂಗಳೂರು ವಿವಿ ಘಟಕ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ (Ghousiya) ಈ ವಿಡಿಯೋನಲ್ಲಿ; ವಿಷಯವೇ ಆಗಿರದ ಹಿಜಾಬ್ ಹೇಗೆ ವಿವಾದದ (controversy) ರೂಪ ಪಡೆಯಿತು ಅಂತ ಹೇಳಿದ್ದಾರೆ. ಮಾರ್ಚ್ 15 ರಂದು ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕವೂ ಸದರಿ ಕಾಲೇಜಿನ ವಿದ್ಯಾರ್ಥಿನಿಯರು ಮುಂದಿನ ಎರಡು ತಿಂಗಳುವರೆಗೆ ಹಿಜಾಬ್ (hijab) ಧರಿಸಿಯೇ ಕಾಲೇಜಿಗೆ ಹೋಗಿದ್ದಾರೆ ಮತ್ತು ಮೇ 7ರವರೆಗೆ ಪರೀಕ್ಷೆಗಳನ್ನು ಸಹ ಅದನ್ನು ಧರಿಸಿಯೇ ಬರೆದಿದ್ದಾರೆ. ಬಳಿಕ ಮೇ 17 ರಂದು ಕಾಲೇಜು ಪುನರಾರಂಭಗೊಳ್ಳುವ ಮುನ್ನಾ ದಿನ ವಿದ್ಯಾರ್ಥಿಗಳ ವಾಟ್ಸ್ಯಾಪ್ ಗ್ರೂಪಲ್ಲಿ ನಾಳೆಯಿಂದ ಕಾಲೇಜು ಶುರುವಾಗುತ್ತದೆ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂಬ ಅನಧಿಕೃತ ಮೆಸೇಜು ಬರುತ್ತದೆ, ಅಂತ ಗೌಸಿಯಾ ಹೇಳುತ್ತಾರೆ.

ಮರುದಿನ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಿ ಪ್ರಾಂಶುಪಾಲರನ್ನು ಕಂಡು ವಿಷಯ ಪ್ರಸ್ತಾಪಿಸಿದಾಗ ಅವರು ಮೆಸೇಜನ್ನು ತಾವೇ ಕಳಿಸಿದ್ದು ಅಂತ ಹೇಳುತ್ತಾರೆ. ಯಾವ ಆಧಾರದಲ್ಲಿ ಅದನ್ನು ಕಳಿಸಿದ್ದು, ಇಷ್ಟು ವರ್ಷಗಳ ಕಾಲ ಇರದ ನಿರ್ಬಂಧ ಈಗ ಯಾಕೆ? ಯಾವುದಾದರೂ ವಿದ್ಯಾರ್ಥಿ ಸಂಘಟನೆಯ ಒತ್ತಡಕ್ಕೆ ಮಣಿದು ಅದನ್ನು ಕಳಿಸಿರುವಿರಾ ಅಂತ ವಿದ್ಯಾರ್ಥಿನಿಯರು ಕೇಳಿದಾಗ ಅವರು ತಮ್ಮ ಮೇಲೆ ಯಾರ ಒತ್ತಡವೂ ಇಲ್ಲವೆಂದು ಹೇಳುತ್ತಾರೆ ಮತ್ತು ವಿದ್ಯಾರ್ಥಿನಿಯರದ್ದು ಯಾವುದೇ ಆಕ್ಷೇಪಣೆ ಇದ್ದರೂ ಅದನ್ನು ಬರವಣಿಗೆಯಲ್ಲಿ ಕೊಡಲು ಆಗ್ರಹಿಸುತ್ತಾರೆ.

ಅವರು ಹೇಳಿದಂತೆ ವಿದ್ಯಾರ್ಥಿನಿಯರು ಬರೆದುಕೊಟ್ಟಿದ್ದಾರೆ. ಗೌಸಿಯಾ ಹೇಳುವುದೇನೆಂದರೆ ಹೈಕೋರ್ಟ್ ನೀಡಿರುವ ತೀರ್ಪು ಪದವಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ಕೋರ್ಟಿನ ಆದೇಶದ ಪ್ರತಿಯಲ್ಲಿ ಅವರು ಈ ಅಂಶವನ್ನು ಹೈಲೈಟ್ ಮಾಡಿ ಮಾಧ್ಯಮದವರಿಗೆ ನೀಡಿದ್ದಾರೆ. ವಿನಾಕಾರಣ ಮತ್ತು ಅನಾವಶ್ಯಕವಾಗಿ ತಮಗೆ ತೊಂದರೆ ನೀಡಲಾಗುತ್ತಿದೆ ಎಂದು ಗೌಸಿಯಾ ಹೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *