ತುಮಕೂರು: ಎಕ್ಸಾಮ್ ಬರೆಯದೇ ಪಾಸ್ ಆಗಿದ್ದಕ್ಕೆ ಯುವಕರು ಸಂಭ್ರಮಾಚರಣೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತಿಪಟೂರು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪರೀಕ್ಷೆ ನಡೆಸದೇ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಕ್ಕೆ ಕಾಲೇಜಿನ ಗೇಟ್ ಮುಂದೆ ಪಾಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು ಸಂಭ್ರಮಿಸಿದ್ದಾರೆ.

ಸಂಭ್ರಮಾಚರಣೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದೇ ವೇಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಜೈಕಾರ ಹಾಕಿದ್ರು. ಇದರ ವಿಡಿಯೋ ಚಿತ್ರೀಕರಿಸಿರೋ ಹುಡುಗರು, ಪರಮಾತ್ಮ ಸಿನಿಮಾದ ಕಾಲೇಜು ಗೇಟಲ್ಲಿ ಫೇಲಾಗಿ ಬಂದವರ ಕಾಪಾಡೋ ಹಾಡನ್ನ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನ ರದ್ದು ಮಾಡಲಾಗಿದೆ. ಎಸ್​ಎಸ್​ಎಲ್​ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಲಾಗಿದೆ.

The post ಕಾಲೇಜು ಗೇಟಲ್ಲಿ ‘ಪಾಸಾಗಿ’ ಬಂದವರ ಕಾಪಾಡೋ ಚೊಂಬೇಶ್ವರ! 2nd PU ವಿದ್ಯಾರ್ಥಿಗಳ ಸಂಭ್ರಮ appeared first on News First Kannada.

Source: newsfirstlive.com

Source link