ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮತ್ತೆ ಟೀಕೆ ಮಾಡಿದ್ದಾರೆ.

ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿದೆ, ಆಡಳಿತ ಯಂತ್ರ ಸಂಪೂರ್ಣ ಸ್ಥಬ್ಧವಾಗಿದೆ, ಇದು ರಾಜ್ಯದ ದೌರ್ಭಾಗ್ಯ. ಸಚಿವರು ಕಚೇರಿ ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ಆದರೆ ಹೈಕಮಾಂಡ್ ಪ್ರತಿನಿಧಿಗೆ ಅಹವಾಲು ಸಲ್ಲಿಸಲು ಕ್ಯೂನಲ್ಲಿ ನಿಂತಿದ್ದಾರೆ.

ಸಿಎಂ ಪರ-ವಿರೋಧಿ ಬಣ ಜಗಳದಲ್ಲಿ ಜನರ ನೋವು ಕೇಳೋರು ಯಾರು? ಜನ ಸಂಕಷ್ಟದಲ್ಲಿದ್ದರೆ ಸಿಎಂ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಪಕ್ಷಾಂತರಿಗಳ ಅನೈತಿಕ ಬಲದಿಂದ ಈ ಸರ್ಕಾರ ಬಂದಿದೆ. ಮೂಲ‌ ನಿವಾಸಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಪ್ರಕೃತಿ ಸಹಜ ನ್ಯಾಯ ಸರಿ.

ಈಗಲೂ ಕಾಲ ಮಿಂಚಿಲ್ಲ ಅನೈತಿಕ ಸರ್ಕಾರ ಬೇಡವೆಂದಾದರೆ ಕಿತ್ತು ಹಾಕಿ. ಪಕ್ಷಾಂತರಿಗಳನ್ನು ಕಿತ್ತು ಹಾಕಿ. ಕೋವಿಡ್ ಎದುರಿಸಲು ಒಂದು ಸುಭದ್ರ ಸರ್ಕಾರ ಬೇಕು. ನೀವು ಯಡಿಯೂರಪ್ಪ ಅವರನ್ನು ಇಟ್ಟುಕೊಳ್ತಿರಾ..? ಕಿತ್ತು ಹಾಕ್ತೀರಾ..? ಅದು ನಿಮ್ಮ ಪಕ್ಷದ ವಿಚಾರ. ಆದ್ರೆ ಶೀಘ್ರ ಒಂದು ನಿರ್ಧಾರಕ್ಕೆ ಬನ್ನಿ, ಆ ನಿರ್ಧಾರ ಮಾಡಿ, ಒಂದು ಸುಭದ್ರ ಸರ್ಕಾರ ನೀಡಿ ಎಂದು ಬಿಜೆಪಿ ನಾಯಕರಿಗೆ ವ್ಯಂಗ್ಯವಾಗಿ ಕಿವಿ‌ ಮಾತು ಹೇಳಿದ್ದಾರೆ.

The post ‘ಕಾಲ ಇನ್ನೂ ಮಿಂಚಿಲ್ಲ’ ಎಂದ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಕೊಟ್ಟ ‘ಆ’ ಸಲಹೆ ಏನು? appeared first on News First Kannada.

Source: newsfirstlive.com

Source link