ಬೀದರ್: ರೆಮಿಡಿಸಿವರ್ ಇಂಜೆಕ್ಷನ್ ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ ಗಡಿ ಜಿಲ್ಲೆ ಬೀದರ್ ನಲ್ಲಿ ದಿನೇ ದಿನೇ ಜೋರಾಗುತ್ತಿದೆ.

ಅಭಿಷೇಕ್ ಹಾಗೂ ಆಸಿಫ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ. ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಇವರನ್ನು ಇಂದು ಬಂಧಿಸಲಾಗಿದೆ.

ಬೀದರ್ ಬ್ರೀಮ್ಸ್ ಆಸ್ಪತ್ರೆಯ ಬಳಿ ಅಕ್ರಮವಾಗಿ ರೆಮಿಡಿಸಿವರ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೀದರ್ ಬ್ರೀಮ್ಸ್ ಆಸ್ಪತ್ರೆ ಬಳಿ ನ್ಯೂಟೌನ್ ಪೊಲೀಸರು ದಾಳಿ ಮಾಡಿ ಇಬ್ಬರು ಬಂಧಿಸಿದ್ದಾರೆ. ಆರೋಪಿಗಳು ರೆಮಿಡಿಸಿವರ್ ಇಂಜೆಕ್ಷನ್ 20 ರಿಂದ 25 ಸಾವಿರಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

ನಿನ್ನೆ ಕೂಡಾ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವರ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಇಂದು ಕೂಡಾ ನ್ಯೂ ಟೌನ್ ಪೊಲೀಸರು ಅಕ್ರಮವಾಗಿ ಕಾಳಸಂತೆಯಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಕೈಗೊಂಡಿದ್ದಾರೆ.

The post ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟ- ಇಬ್ಬರು ಆರೋಪಿಗಳ ಬಂಧನ appeared first on Public TV.

Source: publictv.in

Source link