ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನ ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್​ಗೆ ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ದೇಶದಾದ್ಯಂತ ಕಾನೂನು ವಿದ್ಯಾರ್ಥಿಗಳು ನೂತನ ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಎನ್​ವಿ ರಮಣ ಅವರಿಗೆ ಪತ್ರ ಬರೆದು.. ಕಾಳಸಂತೆಯಲ್ಲಿ ಜೀವ ಉಳಿಸುವ ಔಷಧಿಗಳು ಮಾರಾಟವಾಗುತ್ತಿರುವುದರ ವಿರುದ್ಧ ಮತ್ತು ಅವುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾಗುವುದಕ್ಕೆ ಸಂಬಂಧಿಸಿದಂತೆ ಗೈಡ್​ಲೈನ್ಸ್ ಒಂದನ್ನು ಹೊರಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

The post ‘ಕಾಳಸಂತೆಯಲ್ಲಿ ಔಷಧಿ ಮಾರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ’.. ಕಾನೂನು ವಿದ್ಯಾರ್ಥಿಗಳ ಮನವಿ appeared first on News First Kannada.

Source: newsfirstlive.com

Source link