ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಹರಸಾಹಸಪಡಲಾಗ್ತಾಯಿದೆ. ಇಂಥ ಸಂಕಷ್ಟದ ಹೊತ್ತಲ್ಲಿ ಕೆಲ ಹಣದಾಹಿಗಳು ಜನರ ಕಷ್ಟವನ್ನೇ ಬಂಡವಾಳ ಮಾಡಿಕೊಂಡು ದಂಧೆಗಿಳಿದಿದ್ದಾರೆ.

ಒಂದೆಡೆ ಬೆಡ್​​ ಬ್ಲಾಕಿಂಗ್, ಮತ್ತೊಂದೆಡೆ ಆಕ್ಸಿಜನ್ ಸಿಲಿಂಡರ್​ ಅಕ್ರಮ ಶೇಖರಣೆ ಮತ್ತೊಂದೆಡೆ ರೆಮ್ಡೆಸಿವಿರ್​​ ಔಷಧಿ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿರುವ ದಂಧೆಗಳು ಬಯಲಾಗ್ತಿವೆ. ಸಿಸಿಬಿ‌ ಪೋಲೀಸರು ಮಿಂಚಿನ ಕಾರ್ಯಚರಣೆ ನಡೆಸಿ, ರೆಮ್ಡೆಸಿವಿರ್​​ ಔಷಧವನ್ನ ಕಾಳಸಂತೆಯಲ್ಲಿ‌ಮಾರುತ್ತಿದ್ದ ನಾಲ್ವರು ಖದೀಮರನ್ನ ಬಂಧಿಸಿದ್ದಾರೆ.

ಔಷಧ ಸರಬರಾಜುಗಾರರು ಸೇರಿ ಬಂಧಿತ 4 ಆರೋಪಿಗಳು ಬ್ಲ್ಯಾಕ್ ಮಾರ್ಕೆಟ್ನಲ್ಲಿ ರೆಮ್ಡೆಸಿವಿರ್ ಔಷಧಿಯನ್ನ 10 ರಿಂದ 11 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.  ಈ ಸಂಬಂಧ ಈವರೆಗೂ 6 ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಬಳಿ ಇದ್ದ ಔಷಧಿಯನ್ನ ಜಪ್ತಿ ಮಾಡಲಾಗಿದೆ.

The post ಕಾಳಸಂತೆಯಲ್ಲಿ ₹10-11 ಸಾವಿರಕ್ಕೆ ರೆಮ್ಡೆಸಿವಿರ್ ಮಾರುತ್ತಿದ್ದ ಖದೀಮರು ಅಂದರ್ appeared first on News First Kannada.

Source: newsfirstlive.com

Source link