ಕಾಳಿ ಸ್ವಾಮೀಜಿ
ಮಂಡ್ಯ: ಕೋಮುಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ಆರೋಪದಡಿ ಇಂದು ಬೆಳಗ್ಗೆ ಕಾಳಿ ಸ್ವಾಮಿಯನ್ನು (Kali swami) ವಶಕ್ಕೆ ಪೊಲೀಸರು ಪಡೆದಿದ್ದರು. ಇಂದು ಚಿಕ್ಕಮಗಳೂರಿನ ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧದ ಜಾಮೀನು ಅರ್ಜಿ (Bail application) ಮುಂದೂಡಿಕೆ ಹಿನ್ನೆಲೆ ಕಾಳಿ ಸ್ವಾಮಿಯನ್ನು ಪೊಲೀಸ್ ಸಿಬ್ಬಂದಿ ಜೈಲಿಗೆ ಕರೆತಂದಿದ್ದಾರೆ. ಆಟೋದಲ್ಲಿ ಮಂಡ್ಯ ಜೈಲಿಗೆ (Jail) ಕಾಳಿ ಸ್ವಾಮಿಯನ್ನು ಕರೆತಂದಿದ್ದಾರೆ. ಮಂಡ್ಯ ಜೆಎಂಎಫ್ಸಿ ಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದೆ. ಒಂದು ವೇಳೆ ನಾಳೆಯೂ ಜಾಮೀನು ನಿರಾಕರಿಸಿದರೆ 14 ದಿನ ಜೈಲು ವಾಸ ಅನುಭವಿಸಬೇಕಾಗುತ್ತದೆ. ಜೈಲಿನ ಒಳಗೆ ಕಾಲಿಡುವ ಮೊದಲು ಮುಖಕ್ಕೆ ಕಾವಿ ಬಟ್ಟೆಯನ್ನು ಕಾಳಿ ಸ್ವಾಮಿ ಸುತ್ತಿಕೊಂಡಿದ್ದಾರೆ.
ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಾಳಿಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ, ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ: ವಕೀಲ
ವಿವಾದಾತ್ಮಕ ಹೇಳಿಕೆ ಸಲುವಾಗಿ ಬಂಧನಕ್ಕೀಡಾಗಿರುವ ರಿಷಿಕುಮಾರ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ವಕೀಲ ಬಾಲರಾಜ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಾಲರಾಜ್ ಅವರು ರಿಷಿಕುಮಾರ ಸ್ವಾಮೀಜಿ ಪರ ವಕೀಲ.
ರಿಷಿಕುಮಾರ ಸ್ವಾಮೀಜಿಯವರ ಹೇಳಿಕೆ ವಿವಾದಾತ್ಮಕ ಅಲ್ಲ. ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸಮನ್ವಿ ಅಸ್ತಿ ವಿಸರ್ಜನೆಗೆ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದಿದ್ರು. ವಾಪಾಸ್ ತೆರಳುವ ವೇಳೆ ಮಸೀದಿಯಲ್ಲಿನ ದೇವಾಲಯದ ಕುರುಹು ಕಂಡು ಮನಸ್ಸಿನ ನೋವು ಹೊರಹಾಕಿದ್ದಾರೆ. ಕಾನೂನು ಹೋರಾಟದ ಮೂಲಕ ಮಸೀದಿ ಕೆಡವಿ ಮಂದಿರ ಕಟ್ಟುತ್ತೇವೆ ಎಂಬುದು ಅವರ ಹೇಳಿಕೆಯ ಭಾವ. ಒಡೆಯುವುದು ಎಂದರೆ ಕಾನೂನಾತ್ಮಕವಾಗಿ ಒಡೆಯುವುದು ಎಂಬುದು ಅವರ ಭಾವನೆ ಎಂದು ರಿಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಯನ್ನು ರಿಷಿಕುಮಾರ ಸ್ವಾಮೀಜಿ ಪರ ವಕೀಲ ಬಾಲರಾಜ್ ಸಮರ್ಥಿಸಿಕೊಂಡಿದ್ದಾರೆ.