ಬೆಂಗಳೂರು: ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಮಾತ್ರ ಯಾವುದೇ ಹೇಳಿಕೆ ನೀಡದೆ ಅಂತರ ಕಾಯ್ದುಕೊಂಡಿದ್ದರು. ಪಕ್ಷದಲ್ಲಿ ತನಗೆ ಆಗುತ್ತಿರುವ ಹಿನ್ನಡೆ ಬಗ್ಗೆ ತುಟಿಕ್​​ ಪಿಟಿಕ್​​ ಎನ್ನದ ಬಿ. ಶ್ರೀರಾಮುಲು ಬಹಿರಂಗವಾಗಿಯೇ ಡಿಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಹೀಗಿರುವಾಗಲೇ ಬಿಜೆಪಿ ಹೈಕಮಾಂಡ್​​ನಿಂದ ಸಚಿವ ಶ್ರೀರಾಮುಲುಗೆ ಬುಲಾವ್​​ ಬಂದಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆ ಖಾತ್ರಿಯಾದ ಬೆನ್ನಲ್ಲೇ ಬಿ. ಶ್ರೀರಾಮುಲು ಅವರನ್ನು ಬಿಜೆಪಿ ಹೈಕಮಾಂಡ್​​ ದೆಹಲಿಗೆ ಬರುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಪ್ರಯಾಣ ಆರಂಭಿಸಿದ್ದ ಬಿ. ಶ್ರೀರಾಮುಲು ಅವರು ದೆಹಲಿ ತಲುಪಿದಿದ್ದಾರೆ. ವಾಲ್ಮೀಕಿ ನಾಯಕ ಸಮುದಾಯದ ಕೋಟಾದಲ್ಲಿ ರಾಮುಲು ಅವರಿಗೆ ಡಿಸಿಎಂ ಪೋಸ್ಟ್​ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸರ್ಕಾರದಲ್ಲಷ್ಟೇ ಅಲ್ಲ, ಬಿಜೆಪಿಯಲ್ಲೂ ಬದಲಾವಣೆಯ ಪರ್ವಕ್ಕೆ ಕೌಂಟ್​ಡೌನ್

ಒಂದು ವೇಳೆ ಸಿಎಂ ಯಡಿಯೂರಪ್ಪ ಬದಲಾವಣೆಯಾದರೆ ಶ್ರೀರಾಮುಲುಗೆ ಡಿಸಿಎಂ ಪೋಸ್ಟ್​ ಪಕ್ಕಾ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಇತರೆ ಸಮುದಾಯದ ನಾಯಕರು ಡಿಸಿಎಂ ಪೋಸ್ಟ್​ ನೀಡುವಂತೆ ಹೈಕಮಾಂಡ್​​ಗೆ ಪಟ್ಟು ಹಿಡಿಯಬಹುದು ಎನ್ನುತ್ತಿವೆ ಬಿಜೆಪಿ ಮೂಲಗಳು.

The post ಕಾವೇರಿದ ನಾಯಕತ್ವ ಬದಲಾವಣೆ ವಿಚಾರ; ಹೈಕಮಾಂಡ್​ ಬುಲಾವ್​​ ಮೇರೆಗೆ ದೆಹಲಿ ತಲುಪಿದ ರಾಮುಲು appeared first on News First Kannada.

Source: newsfirstlive.com

Source link