ಚಾಮರಾಜನಗರ: ಕಾವೇರಿ ವನ್ಯಧಾಮ‌ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆಯಾಗಿರುವುದು ಬೆಳಕಿಗೆ ಬಂದಿದ್ದು ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಹೂಕುಂದ ಬಳಿಯ ಕೌಗಲ್ ವಾಚಿಂಗ್ ಟವರ್ ಸಮೀಪ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ. ನಕ್ಸಲರು ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಆಂತರಿಕ ಭದ್ರತಾ ಸಿಬ್ಬಂದಿ ಸ್ಥಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಹೃದಯಾಘಾತವಾಗಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಬಂಡೀಪುರ ವ್ಯಾಪ್ತಿಯ ಕಬ್ಬೇಪುರದ ಕಡರಿಗುಡ್ಡ ಹಾಗೂ ಚಾಮರಾಜನಗರದ ಗಣಿಗೆರೆ ಬಳಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಕಳೆದ 4-5 ವರ್ಷಗಳ ಹಿಂದೆ ವಿದೇಶಿಗರೊಬ್ಬರು ಸ್ಯಾಟಲೈಟ್ ಫೋನ್ ಬಳಸಿದ್ದರು.. ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎನ್ನಲಾಗಿದೆ. ನಕ್ಸಲರು ಅಥವಾ ಉಗ್ರಗಾಮಿಗಳು ಸ್ಯಾಟಲೈಟ್ ಬಳಸಿರಬಹುದಾ ಎಂದು ಶಂಕಿಸಲಾಗಿದ್ದು ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಹಿತಿ ಸಂಗ್ರಹಿಸಿದ್ದಾರೆ.

The post ಕಾವೇರಿ ವನ್ಯಧಾಮದಲ್ಲಿ ಸ್ಯಾಟಲೈಟ್ ಫೋನ್ ಬಳಕೆ: ನಕ್ಸಲರು ನುಸುಳಿರುವ ಶಂಕೆ appeared first on News First Kannada.

Source: newsfirstlive.com

Source link