ಕಾವ್ಯಾಂಜಲಿ ಸೀರಿಯಲ್​ನಲ್ಲಿ ಹೊಸ ಟ್ವಿಸ್ಟ್​ ಬರ್ತಿದೆ. ಆ ಟ್ವಿಸ್ಟ್​ನ್ನು ಹೊತ್ತು ತರುತ್ತಿರುವವರೇ ಮಂಡ್ಯ ರಮೇಶ್​. ಯೆಸ್​, ಈಗಾಗಲೇ ಕಾವ್ಯಾ, ಸಿದ್ಧಾರ್ಥ ಲವ್​ ಸ್ಟೋರಿ ಟ್ರಾಕ್​ ಶುರುವಾಗಿದ್ದು, ರೆಟ್ರೋ ಲುಕ್​ನಲ್ಲಿ ಇಬ್ಬರು ಪ್ರಪೋಸ್ ಮಾಡುವ ಸೀನ್​ಗಳು ಶೂಟಿಂಗ್​ ಮಾಡಲಾಗಿತ್ತು. ಈಗ ಇನ್ನೊಂದು ಲವ್​ ಬರ್ಡ್ಸ್​ ಸುಶಾಂತ್​, ಅಂಜಲಿ ಮಡಿಕೇರಿಯಲ್ಲಿ ಶೂಟಿಂಗ್​​ ಮಾಡ್ತಿದ್ದಾರೆ. ಇವರ ಜೊತೆ ಮತ್ತೆ ಮಂಡ್ಯ ರಮೇಶ್​ ಕಿರುತೆರೆಗೆ ಬಣ್ಣ ಹಚ್ಚಿದ್ದಾರೆ.

ಮಂಡ್ಯ ರಮೇಶ್​ ಅವರು ವಿಭಿನ್ನ ಪಾತ್ರ ನಿಭಾಯಿಸುತ್ತಿದ್ದಾರೆ. ಇತ್ತಿಚೀನ ದಿನಗಳಲ್ಲಿ ಇಷ್ಟು ವಯಸ್ಸಾದ ಪಾತ್ರ ಮಾಡಿರಲಿಲ್ಲ. ನನಗೂ ಒಂದು ಸವಾಲು. ಸಂಬಂಧಗಳ ಸಂಘರ್ಷವನ್ನು ಕಾವ್ಯಾಂಜಲಿ ಧಾರವಾಹಿಯಲ್ಲಿ ನಿರ್ಧೇಶಕರು ತುಂಬಾ ಚನ್ನಾಗಿ ತೋರಿಸ್ತಿದ್ದಾರೆ. ಕೌಟಂಬಿಕ ಧಾರವಾಹಿಗಳು ಇನ್ನೂ ಹೆಚ್ಚಾಗಬೇಕು. ನಾನು ಹಣ್ಣಾದ ಒಂದು ಪಾತ್ರ. ಪಾತ್ರದ ಅವಧಿ ಕಡಿಮೆ ಇದ್ರು ಕೂಡಾ ಕಾವ್ಯಾಂಜಲಿಗೆ ಒಂದು ದೊಡ್ಡ ತಿರುವು ಸಿಗಲಿದೆ ಎಂಬುವುದು ರಮೇಶ್​ ಅವರ ಮಾತು.

ಇನ್ನೂ ಮಡಿಕೇರಿಯಲ್ಲಿ ಶೂಟಿಂಗ್​ ಅದ್ಮೇಲೆ ರೋಮ್ಯಾಂಟಿಕ್​ ಸೀನ್ಸ್​ ಇಲ್ಲ ಅಂದ್ರೆ ಹೆಂಗೆ​ ಹೇಳಿ? ಈ ಬಗ್ಗೆ ಸುಶಾಂತ್​, ಅಂಜಲಿ ಮಾತನಾಡಿದ್ದು, ಸುಶಾಂತ್​ ಬರ್ತ್​ ಡೇ ನೆಪ ಹೇಳಿ ಮಡಿಕೇರಿಗೆ ಬಂದಿದ್ದಿವಿ. ಇಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಕತೆಯ ಟ್ವಿಸ್ಟ್​ ಬಗ್ಗೆ ಒಂದೊಳ್ಳೆಯ ಮಾಹಿತಿ ನೀಡಿದ್ರು.

ಮಂಡ್ಯ ರಮೇಶ್​ ಅವರ ಪಾತ್ರದ ಕುರಿತು ಗುಟ್ಟು ಬಿಟ್ಟು ಕೊಡದ ತಂಡ, ಹತ್ತು ಹಲವು ಟ್ವಿಸ್ಟ್​ಗಳೊಂದಿಗೆ ಒಂದಿಷ್ಟು ಕ್ಯೂಟ್​ ರೋಮ್ಯಾನ್ಸ್​ ಜೊತೆ ಕಾವ್ಯಾಂಜಲಿ ಧಾರವಾಹಿ ವೀಕ್ಷಕರ ಮುಂದೆ ಬರಲಿದೆ.

The post ‘ಕಾವ್ಯಾಂಜಲಿ’ ಧಾರವಾಹಿಗೆ ಹೊಸ ಟರ್ನಿಂಗ್.. ಟ್ವಿಸ್ಟ್ ಹೊತ್ತು ತಂದ ಮಂಡ್ಯ ರಮೇಶ್​ appeared first on News First Kannada.

Source: newsfirstlive.com

Source link