ನಟಿ ಕಾವ್ಯಾ ಗೌಡ ಮದುವೆ ಸಂಭ್ರಮದ ಬಗ್ಗೆ ನಿಮಗೆ ಮಾಹಿತಿ ನೀಡ್ತಾನೆ ಬಂದಿದ್ದಿವಿ. ಕಾವ್ಯಾ ಕಲ್ಯಾಣ ವೈಭೋಗ ಯಾವುದೇ ಕೊರತೆಯಿಲ್ಲದೇ ಶಾಸ್ತ್ರೋಕ್ತವಾಗಿ ಜರುಗಿದ್ದು, ಮೊದಲು ಕಾವ್ಯ ಹಾಗೂ ಸೋಮಶೇಖರ್ ಅವರ ನಿಶ್ಚಿತಾರ್ಥ ನಡೆಯಿತು.
ಶಾಸ್ತ್ರೋಕ್ತ ನಿಶ್ಚಿತಾರ್ಥದ ನಂತರ ಡಿಸೆಂಬರ್ 1 ರಂದು ಅದ್ಧೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ಜರುಗಿತು.
ಕಾವ್ಯಾ ಕೆಂಪು ಬಣ್ಣದ ಸಿಲ್ವರ್ ಕೋಟೆಡ್ ಲೆಹಂಗಾ ತೊಟ್ಟಿದ್ದರು..ಅದಕ್ಕೊಪ್ಪುವ ಚಂದದ ಜ್ಯೂವಲೆರೆಗಳನ್ನ ಧರಿಸಿ ಗೊಂಬೆಯಂತೆ ಮಿಂಚಿದ್ರೇ..ಸೋಮಶೇಖರ್ ಅವರು ಬ್ಲ್ಯಾಕ್ ಆ್ಯಂಡ್ ವೈಟ್ ಸೂಟ್ನಲ್ಲಿ ಸಖತ್ ಆಗಿ ಕಾಣುತ್ತಿದ್ದರು.
ಡಿಸೆಂಬರ್ 2 ರಂದು ಜರುಗಿದ ಶುಭ ಮೂಹರ್ತದಲ್ಲಿ ನಟಿ ಕಾವ್ಯಾ ಗೌಡ ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್ ಅವರ ಜೊತೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನಟಿ ಕಾವ್ಯಾ ಗೌಡ ಹಾಗೂ ಸೋಮಶೇಖರ್ ಹೀಗೇ ನಗು ನಗುತ್ತಾ ಇರಲಿ ಅನ್ನೋದೇ ನಮ್ಮ ಆಶಯ.