ನವದೆಹಲಿ: ಇಂದು ನಡೆದ ಕಾಶ್ಮೀರಿ ನಾಯಕರ ಜೊತೆಗಿನ ಪ್ರಧಾನಿ ಮೋದಿ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಎದುರು 5 ಬೇಡಿಕೆಗಳನ್ನು ಇಟ್ಟಿದೆ. ಸಭೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ತಾವು 5 ಬೇಡಿಕೆಗಳನ್ನು ಇಟ್ಟಿರುವುದಾಗಿ ಹೇಳಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಗುಲಾಮ್ ನಬಿ ಆಜಾದ್ ಇಟ್ಟ ಬೇಡಿಕೆಗಳೇನು..?

ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ 5 ಬೇಡಿಕೆಗಳು..
1. ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವ ನೀಡಬೇಕು. ಅವುಗಳನ್ನ ರಾಜ್ಯಗಳನ್ನಾಗಿ ಪರಿಗಣಿಸಬೇಕು.
2. ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನ ಮರುಸ್ಥಾಪಿಸಲು ವಿಧಾನಸಭಾ ಚುನಾವಣೆಗಳನ್ನ ನಡೆಸಬೇಕು.
3. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನ ಮರಳಿ ಕರೆಸಬೇಕು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಬೇಕು.
4. ಜಮ್ಮು ಮತ್ತು ಕಾಶ್ಮೀರದಲ್ಲಿ 370 ಯನ್ನು ನಿಷ್ಕ್ರಿಯಗೊಳಿಸಿದ ನಂತರ ಬಂಧಿತರಾಗಿರುವ ಎಲ್ಲ ರಾಜಕೀಯ ಮುಖಂಡರನ್ನೂ ಬಿಡುಗಡೆಗೊಳಿಸಬೇಕು.
5. ಜಮ್ಮು ಮತ್ತು ಕಾಶ್ಮೀರದ ನಿವಾಸ ಕಾನೂನುಗಳನ್ನು ಮರುಸ್ಥಾಪಿಸಬೇಕು.

The post ಕಾಶ್ಮೀರಿ ನಾಯಕರ ಜೊತೆ ಪ್ರಧಾನಿ ಸಭೆ: ಕಾಂಗ್ರೆಸ್ ಮುಂದಿಟ್ಟ 5 ಬೇಡಿಕೆಗಳೇನು..? appeared first on News First Kannada.

Source: newsfirstlive.com

Source link