ಕಾಶ್ಮೀರಿ ಪಂಡಿತರನ್ನು ಅವರ ಕಾಲೊನಿಯಲ್ಲಿ ಬಂಧಿ ಮಾಡಲಾಗಿದೆ, ಇದು ನ್ಯಾಯವೇ?: ಅರವಿಂದ ಕೇಜ್ರಿವಾಲ್ | Kashmiri Pandits were locked inside their colonies Is this justice asks Arvind Kejriwal


ಕಾಶ್ಮೀರಿ ಪಂಡಿತರನ್ನು ಅವರ ಕಾಲೊನಿಯಲ್ಲಿ ಬಂಧಿ ಮಾಡಲಾಗಿದೆ, ಇದು ನ್ಯಾಯವೇ?: ಅರವಿಂದ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್

“ಕಾಶ್ಮೀರಿ ಪಂಡಿತರಿಗೆ ಒಂದೇ ಒಂದು ಬೇಡಿಕೆ ಇದೆ. ಅದು ಅವರ ಭದ್ರತೆಯ ಬೇಡಿಕೆ. ಭಯೋತ್ಪಾದಕರು ರಾಹುಲ್ ಭಟ್, ರಜನಿ ಬಾಲಾ ಮತ್ತು ಮಖನ್ ಲಾಲ್ ಬಿಂದ್ರೂ ಸೇರಿದಂತೆ 16 ಕಾಶ್ಮೀರಿ ಪಂಡಿತರನ್ನು ಕೊಂದರು. ಆದರೆ ಕೇಂದ್ರ ಏನೂ ಮಾಡಲಿಲ್ಲ.

ದೆಹಲಿ:ಕಾಶ್ಮೀರ ಕಣಿವೆಯಲ್ಲಿ (Kashmir Valley) ಸಮುದಾಯದ ಸದಸ್ಯರ ಹತ್ಯೆಗಳನ್ನು ವಿರೋಧಿಸಿ ಕಾಶ್ಮೀರಿ ಪಂಡಿತರನ್ನು(Kashmiri Pandits) ಅವರ ಕಾಲೊನಿಗಳಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬುಧವಾರ ಹೇಳಿದ್ದಾರೆ. “ಕಾಶ್ಮೀರಿ ಪಂಡಿತರಿಗೆ ಒಂದೇ ಒಂದು ಬೇಡಿಕೆ ಇದೆ. ಅದು ಅವರ ಭದ್ರತೆಯ ಬೇಡಿಕೆ. ಭಯೋತ್ಪಾದಕರು ರಾಹುಲ್ ಭಟ್, ರಜನಿ ಬಾಲಾ ಮತ್ತು ಮಖನ್ ಲಾಲ್ ಬಿಂದ್ರೂ ಸೇರಿದಂತೆ 16 ಕಾಶ್ಮೀರಿ ಪಂಡಿತರನ್ನು ಕೊಂದರು. ಆದರೆ ಕೇಂದ್ರ ಏನೂ ಮಾಡಲಿಲ್ಲ. ಅವರು ಪ್ರತಿಭಟಿಸಿದಾಗ, ಪಂಡಿತರನ್ನು ಅವರ ಕಾಲೊನಿಯೊಳಗೆ ಬಂಧಿಸಲಾಯಿತು. ಇದು ನ್ಯಾಯವೇ? ಎಂದು ಕೇಜ್ರಿವಾಲ್ ಹೇಳಿರುವುದಾಗಿ ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿದೆ. “1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರೊಂದಿಗೆ ನಡೆದ ಅದೇ ವಿಷಯ ಈಗ ಕಾಶ್ಮೀರಿ ಪಂಡಿತರೊಂದಿಗೆ ನಡೆಯುತ್ತಿದೆ. ಅವರ ಮನೆ, ಕಚೇರಿ ಮತ್ತು ರಸ್ತೆಗಳಲ್ಲಿ ಅವರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಇದು ಮಾನವೀಯತೆ ಮತ್ತು ದೇಶಕ್ಕೆ ವಿರುದ್ಧವಾಗಿದೆ.ಅದನ್ನು ತಡೆಯಲು ಯಾರೂ ಏನನ್ನೂ ಮಾಡುತ್ತಿಲ್ಲ ಎಂದಿದ್ದಾರೆ ಕೇಜ್ರಿವಾಲ್.

ಉಗ್ರರುತಮ್ಮ ಸಮುದಾಯದ ಸದಸ್ಯರನ್ನು ಹತ್ಯೆ ಮಾಡುತ್ತಿರುವ ಬಗ್ಗೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಕಾಶ್ಮೀರಿ ಪಂಡಿತರಲ್ಲಿ ವ್ಯಾಪಕ ಆಕ್ರೋಶವಿದೆ. ಮಂಗಳವಾರ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಗೋಪಾಲ್‌ಪೋರಾದಲ್ಲಿ ಜಮ್ಮುವಿನ ಮಹಿಳಾ ಶಾಲಾ ಶಿಕ್ಷಕಿಯೊಬ್ಬರನ್ನು ಕ್ಯಾಂಪಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬುದ್ಗಾಮ್‌ನ ಚದೂರ ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದ ಹದಿನೈದು ದಿನಗಳ ನಂತರ ಈ ಘಟನೆ ನಡೆದಿದೆ.

ಪ್ರಧಾನ ಮಂತ್ರಿಯವರ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಗಳನ್ನು ನೀಡಲಾದ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಗುಂಪು, ಅವರು ಕಾಶ್ಮೀರದ ಹೊರಗೆ ‘ಸಾಮೂಹಿಕ ವಲಸೆ’ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ನಾವು ಲಾರಿ ಮಾಲೀಕರೊಂದಿಗೆ ದರವನ್ನು ನಿಗದಿಪಡಿಸಲು ಬಂದಿದ್ದೇವೆ, ಇಂದು ಸಂಜೆಯೊಳಗೆ ಸರ್ಕಾರದಿಂದ ಯಾವ ನಿರ್ಧಾರ ಬರುತ್ತದೆಯೇ ಎಂದು ನೋಡೋಣ. ಇಲ್ಲದಿದ್ದರೆ ನಾವು ನಾಳೆ ಇಲ್ಲಿಂದ ವಲಸೆ ಹೋಗುತ್ತೇವೆ” ಎಂದು ಅವರ ಪ್ರತಿನಿಧಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

TV9 Kannada


Leave a Reply

Your email address will not be published. Required fields are marked *