ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳ ಕನ್ನಡ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಕೇರಳ ಸರಕಾರ ಹುನ್ನಾರ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.

ಗಡಿನಾಡಲ್ಲಿ ಕನ್ನಡಿಗರ ಮೇಲೆ ಮಳಯಾಳಂ ಭಾಷೆ ಹೇರಲು ಮುಂದಾದ ಕೇರಳ ಸರಕಾರ ಕಾಸರಗೋಡು ಜಿಲ್ಲೆಯ 11 ಗ್ರಾಮಗಳ ಹೆಸರು ಕನ್ನಡದಿಂದ ಮಲಯಾಳಂಗೆ ಪರಿವರ್ತಿಸಲು ಸಿದ್ದತೆ ನಡೆಸಿದೆ ಎಂದು ಆರೋಪಿಸಿ.. ಕೇರಳ ಸರಕಾರದ ವಿರುದ್ಧ ಗಡಿನಾಡ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಿಗರೇ ಹೆಚ್ವಾಗಿರುವ ಕೇರಳದ ಕಾಸರಗೋಡು ಜಿಲ್ಲೆಯ ಕೆಲ ಭಾಗದಲ್ಲಿ ಮಲಯಾಳಂ ಭಾಷೆ ಹೇರಿಕೆ ಮಾಡಲು ಯತ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಮಧೂರು-ಮಧುರಂ, ಮಲ್ಲ-ಮಲ್ಲಂ, ಮಂಜೇಶ್ವರ -ಮಂಜೇಶ್ವರಂ, ಕುಂಬಳೆ-ಕುಂಬ್ಲಾ, ಪಿಳಿಕುಂಜೆ- ಪಿಳಿಕುನ್ನು, ಬೇದಡ್ಕ-ಬೆಡಗಂ, ಆನೆಬಾಗಿಲು-ಆನೆಬಾಗಿಲ್, ಹೊಸದುರ್ಗ – ಪುದಿಯಕೋಟೆ ಎಂದು ಗ್ರಾಮದ ಹೆಸರುಗಳಿಗೆ ಕೇರಳ ಸರಕಾರ ಮಲಯಾಳಂ ರೂಪ ನೀಡಿದೆ ಎನ್ನಲಾಗಿದೆ.

ಈ ಹಿನ್ನೆಲೆ ಗ್ರಾಮಗಳ ಕನ್ನಡ ಹೆಸರು ಬದಲಿಸದಂತೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಕೇರಳ ಸರಕಾರಕ್ಕೆ ಪತ್ರ ಬರೆದಿದ್ದಾರೆ.

The post ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಹೇರಿಕೆ..? ಗ್ರಾಮಗಳ ಹೆಸರು ಬದಲಿಸಿತಾ ಕೇರಳ ಸರ್ಕಾರ..? appeared first on News First Kannada.

Source: newsfirstlive.com

Source link