ಕಾಸರಗೋಡಿನ ಸ್ವರ್ಗದಲ್ಲಿರುವ ದೇವಾಲಯಕ್ಕೆ ದಲಿತರ ಪ್ರವೇಶ; ನೂರಾರು ವರ್ಷಗಳ ಅಸಮಾನತೆ ಅಂತ್ಯ | Dalits enter temple located at Swarga in kasaragod Kerala ending hundreds of years of discrimination


ಕಾಸರಗೋಡಿನ ಸ್ವರ್ಗದಲ್ಲಿರುವ ದೇವಾಲಯಕ್ಕೆ ದಲಿತರ ಪ್ರವೇಶ; ನೂರಾರು ವರ್ಷಗಳ ಅಸಮಾನತೆ ಅಂತ್ಯ

ಪ್ರಾತಿನಿಧಿಕ ಚಿತ್ರ

ತಿರುವನಂತಪುರಂ: ಅನಾದಿ ಕಾಲದ ಸಂಪ್ರದಾಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪಟ್ಟಿಕಜಾತಿ ಕ್ಷೇಮ ಸಮಿತಿ (ಪರಿಶಿಷ್ಟಜಾತಿ ಕಲ್ಯಾಣ ಸಮಿತಿ- PKS) ನೇತೃತ್ವದ ದಲಿತರ (Dalit) ಗುಂಪು ಕೇರಳದ ಕಾಸರಗೋಡು ಜಿಲ್ಲೆಯ ಎಣ್ಮಕಜೆಯ ಸ್ವರ್ಗದಲ್ಲಿರುವ ಜಟಾಧಾರಿ ದೇವಸ್ಥಾನಂ (Jatadhari Devasthanam) ದೇವಾಲಯಕ್ಕೆ ಪ್ರವೇಶಿಸಿತು. ಗ್ರಾಮದಲ್ಲಿ ವಾಸಿಸುವ ‘ಮೇಲ್ಜಾತಿ’ ಜನರಿಗೆ ಮಾತ್ರ ಮೀಸಲಾದ ನಿಷೇಧಿತ ಮೆಟ್ಟಿಲುಗಳನ್ನು ದಲಿತ ಗುಂಪು ಕೂಡ ಏರಿತು. ಪಿಕೆಎಸ್ ಸದಸ್ಯರು ಕೂಡಾ ದಲಿತರ ಜೊತೆಯಲ್ಲಿ ತಮ್ಮನ್ನು ನಿರ್ಬಂಧಿಸಿದ 18 ಪವಿತ್ರ ಮೆಟ್ಟಿಲುಗಳನ್ನು ಏರಿದರು. ಈ ಹಿಂದೆ ದಲಿತ ನಿವಾಸಿ ಕೃಷ್ಣ ಮೋಹನ್ ಎಂಬವರು ಇದೇ ರೀತಿ ದೇವಾಲಯ ಪ್ರವೇಶಿಸಿದ್ದರು . ಮೋಹನ್ ದೇವಾಲಯವನ್ನು ಪ್ರವೇಶಿಸಿ ನಿಷೇಧಿತ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿದ್ದರು.ಆದರೆ  ಕೃಷ್ಣ ಮೋಹನ್ ಈ ರೀತಿ ಮಾಡಿದ್ದಾರೆ ಎಂಬುದನ್ನು ಅವರ  ಸಮುದಾಯದ ಜನರು ನಂಬಲಿಲ್ಲ. ಪಟ್ಟಿಕಜಾತಿ ಕ್ಷೇಮ ಸಮಿತಿಯು ದೇವಾಲಯವನ್ನು ಪ್ರವೇಶಿಸಿ ಪವಿತ್ರ ಮೆಟ್ಟಿಲುಗಳನ್ನು ಹತ್ತಿದ ನಂತರ ಪುರಾತನ ಸಂಪ್ರದಾಯಕ್ಕೆ ಅಂತ್ಯ ಹಾಡಿತು  ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 1947 ರಲ್ಲಿ ದೇವಾಲಯ ಪ್ರವೇಶದ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದ್ದರೂ ಸಹ ಈ ಪ್ರದೇಶದಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಮೊದಲು ಅವರ್ಣರಿಗೆ  ದೇವಾಲಯವನ್ನು ಪ್ರವೇಶಿಸಲು ಅವಕಾಶವಿರಲಿಲ್ಲ. ಈ ನಿಷೇಧವನ್ನು ಮೊದಲು 1936 ರಲ್ಲಿ ರದ್ದುಗೊಳಿಸಲಾಯಿತು, ಅವರ್ಣರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಯಿತು ಆದರೆ ಮಲಬಾರ್ ಪ್ರದೇಶದ ಕಾಸರಗೋಡು ಪ್ರದೇಶದಲ್ಲಿ 1947 ರಲ್ಲಿ ಇದು ಜಾರಿಗೆ ಬಂದಿತು.

ಪಿಕೆಎಸ್‌ನ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಪ್ರದೀಪ್‌ ಈ ಬಗ್ಗೆ ಮಾತನಾಡಿದ್ದು, ‘ಪವಿತ್ರ 18 ಮೆಟ್ಟಿಲುಗಳ ಮೂಲಕ ಪ್ರವೇಶ ನಿಷೇಧ ಮಾತ್ರವಲ್ಲದೆ, ದಲಿತರಿಗೆ ತೆಯ್ಯಂ ಪ್ರದರ್ಶನವನ್ನು ಹತ್ತಿರದಿಂದ ವೀಕ್ಷಿಸಲು ಅವಕಾಶವಿಲ್ಲ, ಅವರು ದೂರದಲ್ಲಿ ನಿಲ್ಲಬೇಕು. ದೇವರಿಗೆ ದಕ್ಷಿಣೆಯನ್ನು ಅರ್ಪಿಸಿ, ದಲಿತರು ಅದನ್ನು ಉನ್ನತ ಜಾತಿಯ ವ್ಯಕ್ತಿಗೆ ಹಸ್ತಾಂತರಿಸಬೇಕು, ಅವರು ಅದನ್ನು ದೇವರ  ಮುಂದೆ ಇಡುತ್ತಾರೆ.

‘ಪ್ರಸಾದ’ವನ್ನು ಅವರ ಜಾತಿಯ ಆಧಾರದ ಮೇಲೆ ಪ್ರತ್ಯೇಕವಾಗಿ ಜನರ ನಡುವೆ ಹಂಚಲಾಗುತ್ತಿದೆ ಎಂದು ಪ್ರದೀಪ್ ಹೇಳಿದರು.  ಭಗವಾನ್ ಶಿವನ ಅವತಾರ, ಇಲ್ಲಿ ಜಾತಿ ಆಧರಿಸಿ  ಆಹಾರ ನೀಡಲಾಗುತ್ತದೆ. ಪ್ರಸಾದ ವಿತರಿಸಲು ದೇವಸ್ಥಾನದ ಅಧಿಕಾರಿಗಳು ಕೆಳವರ್ಗದವರ ಹೆಸರು ಹೇಳುತ್ತಿದ್ದು, ದಲಿತರಿಗೆ ದೇವಸ್ಥಾನದ ಬಳಿ ಆಹಾರ ಸೇವಿಸಲು ಅವಕಾಶವಿಲ್ಲ ಎಂದು ಪ್ರದೀಪ್  ಹೇಳುತ್ತಾರೆ.

ಪರಿಶಿಷ್ಟ ಜಾತಿಗಳಾದ ನಲ್ಕೆದಾಯ (ಕೋಪಾಲ), ಜಟಾಧಾರಿ ತೆಯ್ಯಂ ಕಟ್ಟುವ ಜಾತಿ, ಮುಗೇರ ಮತ್ತು ಬೈರ,  ಕೊರಗ ಮತ್ತು ಮಾಯಿಲ ಮುಂತಾದ ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಾದ ತುಳು-ಮಾತನಾಡುವ ಬಿಲ್ಲವರು (ಮಲಯಾಳಂ-ಮಾತನಾಡುವ ತೀಯ ಜಾತಿಗೆ ಸಮಾನ) ಮೆಟ್ಟಿಲು ಬಳಸುವುದನ್ನು ನಿಷೇಧಿಸಲಾಗಿದೆ.

ದೇವಸ್ಥಾನವು ನಾಲ್ಕು ಬ್ರಾಹ್ಮಣ ಕುಟುಂಬಗಳ ಒಡೆತನದಲ್ಲಿದ್ದರೂ, ಇದನ್ನು ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ ಮತ್ತು ಅದರ ದೈನಂದಿನ ಕಾರ್ಯಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗುತ್ತದೆ.

ನಾವು ಈ ಪ್ರಾಚೀನ ತಾರತಮ್ಯದ ಅಭ್ಯಾಸಗಳನ್ನು  ಕೊನೆಗೊಳಿಸಲು ಬಯಸುತ್ತಿದ್ದೇವೆ ಎಂದು ಪಿಕೆಎಸ್  ಹೇಳಿದೆ.ನಮ್ಮ ಸಮಾಜದಲ್ಲಿ ಇನ್ನೂ ಕೆಲವರು ಈ ಅನಿಷ್ಟ ಪದ್ಧತಿಗಳನ್ನು ಅನುಸರಿಸುತ್ತಿದ್ದು, ಈ ಅನಾದಿ  ಕಾಲದ ಆಚರಣೆಗಳನ್ನು ನಿಲ್ಲಿಸಲು ಸರ್ಕಾರದ ಆದೇಶ ಸಾಕಾಗುವುದಿಲ್ಲ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೆ ರಾಧಾಕೃಷ್ಣನ್ ಪಿಟಿಐಗೆ ತಿಳಿಸಿದ್ದಾರೆ. ಈ ಪಿಡುಗನ್ನು ಕೊನೆಗೊಳಿಸಲು ಸಾಮಾಜಿಕ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:  ಗುರ್​​ಗಾಂವ್​​ನಲ್ಲಿ ನಮಾಜ್ ಸ್ಥಳಕ್ಕೆ ತಕರಾರು; ನಮಾಜ್ ಮಾಡಲು ಸ್ಥಳಾವಕಾಶ ಕೊಟ್ಟ ಗುರುದ್ವಾರ

TV9 Kannada


Leave a Reply

Your email address will not be published. Required fields are marked *