ಬೆಂಗಳೂರು: ಕಾಸರಗೋಡಿನಿಂದ ಕತಾರ್​ಗೆ ಸರಬರಾಜಾಗುತ್ತಿದ್ದ ಮಾದಕ ಪದಾರ್ಥ ಜಾಲವನ್ನ ವಲಯದ ಎನ್​.ಸಿಬಿ.ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ಕತಾರ್, ಮಾಲ್ಡೀವ್ಸ್, ಶ್ರೀಲಂಕಾಗೆ ಮಾದಕ ಸರಬರಾಜು ಮಾಡುತ್ತಿದ್ದ ಆರೋಪಿಗಳ ಬಂಧನವಾಗಿದೆ.

ಜೂನ್ 4ರಂದು ಕತಾರ್​ಗೆ ಕಳುಹಿಸಲಾಗುತ್ತಿದ್ದ ಮಾದಕ ವಸ್ತುಗಳನ್ನ ಎನ್​.ಸಿ.ಬಿ ವಶಪಡಿಸಿಕೊಂಡಿತ್ತು. 13 ಬ್ಯಾಕ್​ಪ್ಯಾಕ್​ನಲ್ಲಿಟ್ಟು ಸಾಗಿಸುತ್ತಿದ್ದ 1.2 ಕೆ.ಜಿ ಹ್ಯಾಶಿಶ್ ಆಯಿಲ್​ನ್ನ ವಶಪಡಿಸಿಕೊಳ್ಳಲಾಗಿತ್ತು. ಮುಂದುವರೆದ ತನಿಖೆಯಲ್ಲಿ ಮಾದಕ ಜಾಲದ ಇಬ್ಬರು ಆರೋಪಿಗಳಾದ ಆರ್.ಖಾನ್ ಹಾಗೂ ಎಸ್.ಹುಸೈನ್​ನ್ನ ಎನ್​.ಸಿ.ಬಿ ಅಧಿಕಾಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳ ಬಳಿ, 2.6ಕೆ.ಜಿ ಹ್ಯಾಶಿಶ್ ಆಯಿಲ್ ಜಪ್ತ ಮಾಡಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನ ದಾಖಲು ಮಾಡಲಗಿದೆ. ಈ ಹಿಂದೆ 2019ರಲ್ಲಿ, ಪ್ರಮುಖ ಕಿಂಗ್​ಪಿನ್​ಗಳನ್ನ 2019ರಲ್ಲಿ‌ ಎನ್.​ಸಿ.ಬಿ ಬಂಧಿಸಿದ್ರು.

The post ಕಾಸರಗೋಡು ಟು ಕತಾರ್.. ಅತಿದೊಡ್ಡ ​ಮಾದಕ ವಸ್ತು ಸಾಗಾಟ ಜಾಲ ಪತ್ತೆ appeared first on News First Kannada.

Source: newsfirstlive.com

Source link