ಕಿಂಗ್ಸ್​ ತಂಡದಿಂದ ಕುಂಬ್ಳೆ ಔಟ್! ಇಂಗ್ಲೆಂಡ್ ಅದೃಷ್ಟವನ್ನೇ ಬದಲಿಸಿದ ಕೋಚ್​ಗೆ ಪಂಜಾಬ್ ತಂಡದ ಜವಬ್ದಾರಿ | IPL 2023 Punjab Kings appoint Trevor Bayliss as new head coach replaces Anil Kumble in top post


IPL 2023: ಪಂಜಾಬ್ ತಂಡ 2008 ರಿಂದ ಐಪಿಎಲ್ ಆಡುತ್ತಿದೆ ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2014ರಲ್ಲಿ ಫೈನಲ್ ತಲುಪಿದ್ದ ಕಿಂಗ್ಸ್​ಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಮುಂಬರುವ ಸೀಸನ್​ಗೂ ಮೊದಲು ತನ್ನ ತಂಡಕ್ಕೆ ಹೊಸ ಕೋಚ್ ಆಯ್ಕೆ ಮಾಡಿದೆ. ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಅವರನ್ನು ತಂಡದ ಹೊಸ ಮುಖ್ಯ ಕೋಚ್ ಆಗಿ ಫ್ರಾಂಚೈಸಿ ನೇಮಿಸಿದೆ. ಈ ಹಿಂದೆ ತಂಡದ ಕೋಚ್ ಆಗಿದ್ದ ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಸ್ಥಾನಕ್ಕೆ ಟ್ರೆವರ್ ಬೇಲಿಸ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಪಂಜಾಬ್ ತಂಡ 2008 ರಿಂದ ಐಪಿಎಲ್ ಆಡುತ್ತಿದೆ ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2014ರಲ್ಲಿ ಫೈನಲ್ ತಲುಪಿದ್ದ ಕಿಂಗ್ಸ್​ಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. ಬೇಲಿಸ್ ಆಗಮನದೊಂದಿಗೆ, ಫ್ರ್ಯಾಂಚೈಸ್ ಈ ವರ್ಷ ತನ್ನ ಬರವನ್ನು ಕೊನೆಗೊಳಿಸಲು ಆಶಿಸುತ್ತಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.