ಕಿಂಗ್ ಕೊಹ್ಲಿಗೆ ಬರ್ತ್​​ಡೇ ​​ಗಿಫ್ಟ್; ಜಡೇಜಾ-ಶಮಿ ಶೈನಿಂಗ್, ರಾಹುಲ್-ರೋಹಿತ್​ ಮಿಂಚಿಂಗ್ -ಹೇಗಿತ್ತು ಆಟ?


ಸೆಮಿಫೈನಲ್​​ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಾದ ಪಂದ್ಯದಲ್ಲಿ ಟಾಸ್​​ ಗೆದ್ದ ಟೀಮ್​ ಇಂಡಿಯಾ, ಫೀಲ್ಡಿಂಗ್​ ಆಯ್ಕೆ ಮಾಡಿಕೊಳ್ತು. ಈ ಹಿನ್ನೆಲೆ ಬ್ಯಾಟಿಂಗ್​​​ಗೆ ಬಂದ ಸ್ಕಾಟ್ಲೆಂಡ್​​, ಭಾರತದ ಬೌಲರ್​​ಗಳ ದಾಳಿಗೆ ತತ್ತರಿಸ್ತು. ಆರಂಭದಲ್ಲೇ ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ ಮಾರಕ ಬೌಲಿಂಗ್ ನಡೆಸಿ, ಜಾರ್ಜ್​​ ಮುನ್ಸೆ ಮತ್ತು ಕೈಲ್​ ಕೊಯೆಟ್ಜ್​​​​ಗೆ ಗೇಟ್​ಪಾಸ್​ ನೀಡಿದ್ರು.

Image

ಬಳಿಕ ದಾಳಿಗಿಳಿದ ಜಡೇಜಾ, ಸ್ಕಾಟ್ಲೆಂಡ್​ಗೆ ಕಂಟಕವಾದ್ರು. ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸ್ಕಾಟ್ಲೆಂಡ್​ಗೆ ಜಡೇಜಾ, ಡಬಲ್​ ಶಾಕ್​ ನೀಡಿದ್ರು. ಓವರ್​​​ನಲ್ಲಿ ಬೆರಿಂಗ್ಟನ್​,​ ಮ್ಯಾಥ್ಯೂ ಕ್ರಾಸ್​​ಗೆ ಪೆವಿಲಿಯನ್​​ ದಾರಿ ತೋರಿಸಿದ ಬೆನ್ನಲ್ಲೆ ಮೈಕಲ್​​​ ಲೀಸ್ಕ್​​​​ಗೂ ಜಡೇಜಾ, ಡಗೌಟ್​ ಸೇರುವಂತೆ ಮಾಡಿದ್ರು. ಇದಾದ ನಂತರ ಕ್ರಿಸ್​​ ಗ್ರೀವ್ಸ್​, ಶರಿಫ್​, ಎವಾನ್ಸ್​​, ಮಾರ್ಕ್​ ವ್ಯಾಟ್​​ ಕೂಡ ಬೇಗನೇ ಔಟಾದ್ರು. ಪರಿಣಾಮ ಸ್ಕಾಟ್ಲೆಂಡ್​ 17.4 ಓವರ್​​​ಗಳಲ್ಲಿ ಆಲ್​​ಔಟ್​ ಆಯ್ತು.

Image

ಸ್ಕಾಟ್ಲೆಂಡ್​ ನೀಡಿದ ಸಾಧಾರಣ ಮೊತ್ತವನ್ನ ಬೆನ್ನತ್ತಿದ್ದ ಟೀಮ್​ ಇಂಡಿಯಾ, ಬೌಲರ್​​ಗಳ ಬೆಂಡೆತ್ತಿದ್ರು. ನೆಟ್​ ರನ್​ರೇಟ್​ ಹೆಚ್ಚಿಸಿಕೊಳ್ಳಬೇಕಿದ್ದ ಕಾರಣ ರೋಹಿತ್​​ ಶರ್ಮಾ-ಕೆ.ಎಲ್​ ರಾಹುಲ್​ ಫೋರ್​​- ಸಿಕ್ಸ್​​ಗಳ ಸುರಿಮಳೆಗೈದ್ರು. ಇದರ ನಡುವೆ ರಾಹುಲ್​ 18 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ರು. ಆದರೆ ಗೆಲುವಿನ ಹಂತದಲ್ಲಿದ್ದಾಗ ರೋಹಿತ್​, ರಾಹುಲ್​ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರಾದ್ರು, ಸೂರ್ಯಕುಮಾರ್​​ ವಿನ್ನಿಂಗ್​​ ಸಿಕ್ಸ್​ ಸಿಡಿಸಿದ್ರು. ಪರಿಣಾಮ ಟೀಮ್​ ಇಂಡಿಯಾ 8 ವಿಕೆಟ್​​ಗಳ ಗೆಲುವು ದಾಖಲಿಸ್ತು.

Image

ಸದ್ಯ ಭಾರತ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಸದ್ಯ ನೆಟ್​ರನ್​ರೇಟ್​ ಸಖತ್ತಾಗೇ ಹೆಚ್ಚಿಸಿಕೊಂಡಿದ್ದು, ಸೆಮೀಸ್​ ಆಸೆ ಇನ್ನೂ ಜೀವಂತವಾಗಿದೆ. ಆದರೆ ಸೆಮೀಸ್​ಗೆ ಎಂಟ್ರಿ ಪಡೆಯಬೇಕೆಂದ್ರೆ ಭಾರತಕ್ಕೆ ಒಂದೇ ಮಾರ್ಗ ಇದೆ. ಭಾನುವಾರ ನಡೆಯೋ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಆಫ್ಘಾನಿಸ್ತಾನ ಗೆಲುವು ಸಾಧಿಸಬೇಕು. ಇದು ಸಾಧ್ಯವಾದ್ರೆ ಮಾತ್ರ ಭಾರತ ಸೆಮೀಸ್​​ಗೇರಲು ಅವಕಾಶ ಇದೆ. ಒಂದು ವೇಳೆ ನ್ಯೂಜಿಲೆಂಡ್​ ಗೆದ್ದರೆ, ಅಲ್ಲಿಗೆ ಭಾರತ ವಿಶ್ವಕಪ್​ ಲೀಗ್​​ನಿಂದ ಹೊರಬೀಳಲಿದೆ. ಹಾಗಾಗಿ ಭಾರತದ ಇಡೀ ಕ್ರಿಕೆಟ್​ ಅಭಿಮಾನಿಗಳ ಚಿತ್ತ ಆಫ್ಘನ್​-ಕಿವೀಸ್​ ಪಂದ್ಯದತ್ತ ನೆಟ್ಟಿದೆ.

The post ಕಿಂಗ್ ಕೊಹ್ಲಿಗೆ ಬರ್ತ್​​ಡೇ ​​ಗಿಫ್ಟ್; ಜಡೇಜಾ-ಶಮಿ ಶೈನಿಂಗ್, ರಾಹುಲ್-ರೋಹಿತ್​ ಮಿಂಚಿಂಗ್ -ಹೇಗಿತ್ತು ಆಟ? appeared first on News First Kannada.

News First Live Kannada


Leave a Reply

Your email address will not be published. Required fields are marked *