ಮುಂಬೈ: ಐಪಿಎಲ್ ನಲ್ಲಿಂದು ಎರಡು ಪಂದ್ಯ. ಮೊದಲ ಪಂದ್ಯದಲ್ಲಿ ಕೂಟದ ಅತ್ಯಂತ ಹೈವೋಲ್ಟೇಜ್ ಸೆಣಸಾಟ ನಡೆಯುತ್ತಿದೆ. ಕಿಂಗ್ ಕೊಹ್ಲಿ ಮತ್ತು ಕ್ಯಾಪ್ಟನ್ ಕೂಲ್ ರ ತಂಡಗಳ ನಡುವೆ ಮುಂಬೈನ ವಾಂಖೆಡೆ ಅಂಗಳದಲ್ಲಿ ಪಂದ್ಯ ನಡೆಯುತ್ತಿದೆ.

ಟಾಸ್ ಗೆದ್ದ  ಸಿಎಸ್ ಕೆ ನಾಯಕ ಧೋನಿ ಮೊದಲು ಬ್ಯಾಟಿಂಗ್ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಆರ್ ಸಿಬಿ ತಂಡ ಇದುವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಹಿಂದಿನ ಪಂದ್ಯದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗೆಲುವು ಕಂಡಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಆಡಿದ ನಾಲ್ಕು ಪಂದ್ಯದಲ್ಲಿ ಒಂದು ಸೋತು ಮೂರು ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದೂ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ.

ತಂಡಗಳು:

ಆರ್ ಸಿಬಿ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾ), , ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ನವದೀಪ್ ಸೈನಿ, ಡೇನಿಯಲ್ ಕ್ರಿಶ್ಚಿಯನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್

ಸಿಎಸ್ ಕೆ: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್,  ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾ), ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ದೀಪಕ್ ಚಹರ್, ಶಾರ್ದುಲ್ ಠಾಕೂರ್,ಇಮ್ರಾನ್ ತಾಹೀರ್, ಡ್ವೇನ್ ಬ್ರಾವೋ.

ಕ್ರೀಡೆ – Udayavani – ಉದಯವಾಣಿ
Read More