ಕಿಚಡಿಗೆ ಉಪ್ಪು ಹೆಚ್ಚಾಗಿದ್ದಕ್ಕೆ ಪತ್ನಿಯನ್ನು ಕೊಂದ ವ್ಯಕ್ತಿ; ಉದ್ದನೆಯ ಬಟ್ಟೆಯಲ್ಲಿ ಕತ್ತು ಹಿಸುಕಿ ಹತ್ಯೆ | Man arrested who Kills Wife For Putting Excess Salt In Khichadi At Maharashtra


ಕಿಚಡಿಗೆ ಉಪ್ಪು ಹೆಚ್ಚಾಗಿದ್ದಕ್ಕೆ ಪತ್ನಿಯನ್ನು ಕೊಂದ ವ್ಯಕ್ತಿ; ಉದ್ದನೆಯ ಬಟ್ಟೆಯಲ್ಲಿ ಕತ್ತು ಹಿಸುಕಿ ಹತ್ಯೆ

ಸಾಂಕೇತಿಕ ಚಿತ್ರ

ಕೆಲವು ಕ್ಷುಲ್ಲಕ ಕಾರಣಗಳಿಗೆಲ್ಲ ಕೊಲೆ ನಡೆದುಹೋಗುತ್ತದೆ. ಹಾಗೇ, ಪುಣೆಯಲ್ಲೊಬ್ಬ 40 ವರ್ಷದ ವ್ಯಕ್ತಿ ತನ್ನ ಪತ್ನಿ ಬೆಳಗ್ಗೆ ಉಪಾಹಾರಕ್ಕೆ ನೀಡಿದ ತಿಂಡಿಯಲ್ಲಿ ಉಪ್ಪು ಜಾಸ್ತಿ ಎಂಬ ಕಾರಣಕ್ಕೆ ಸಿಟ್ಟಾಗಿ ಆಕೆಯ ಕತ್ತು ಹಿಸುಕಿ, ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾನೆ. ಭಾಯಂದರ್ ಪೂರ್ವದಲ್ಲಿರುವ ಪಾಠಕ್​ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಆರೋಪಿಯನ್ನು ನೀಲೇಶ್ ಘಗ್​ ಎಂದು ಗುರುತಿಸಲಾಗಿದ್ದು 46 ವರ್ಷ. ಮೃತ ಮಹಿಳೆ ನಿರ್ಮಲಾ. ಶುಕ್ರವಾರ ಬೆಳಗ್ಗೆ ನಿರ್ಮಲಾ ತಿಂಡಿಗೆ ಕಿಚಡಿ ಮಾಡಿದ್ದರು. ಬೆಳಗ್ಗೆ 9.30ರ ಹೊತ್ತಿಗೆ ನೀಲೇಶ್​ ಅದನ್ನು ತಿನ್ನಲು ಕುಳಿತಿದ್ದ. ಆದರೆ ಕಿಚಡಿ ಜಾಸ್ತಿ ಎನ್ನುವಷ್ಟು ಉಪ್ಪಾಗಿತ್ತು. ಅದಕ್ಕೆ ಸಿಟ್ಟಾದ ನೀಲೇಶ್ ಪತ್ನಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ. ನಂತರ ಒಂದು ಉದ್ದನೆಯ ಬಟ್ಟೆಯನ್ನು ಆಕೆಯ ಕುತ್ತಿಗೆಗೆ ಹಾಕಿ ಹಿಸುಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮೀರಾ ಭಯಂದರ್ ತಿಳಿಸಿದ್ದಾರೆ. 

ಇದಾದ ಬಳಿಕ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನೀಲೇಶ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.  ಬರೀ ಕಿಚಡಿ ಉಪ್ಪಾಗಿದ್ದೇ ಕೊಲೆಗೆ ಕಾರಣವೋ ಅಥವಾ ಇನ್ನೇನಾದರೂ ಬೇರೆ ಕಾರಣ ಇರಬಹುದಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗೇ, ಗುರುವಾರ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ರಾಬೋಡಿಯಲ್ಲಿ ಮಾವನೊಬ್ಬ ತನ್ನ ಸೊಸೆಯನ್ನು ಹತ್ಯೆ ಮಾಡಿದ್ದ. ಬೆಳಗ್ಗಿನ ತಿಂಡಿ ಜತೆ ಆಕೆ ಚಹಾ ಕೊಡಲಿಲ್ಲ ಎಂದು ಸಿಟ್ಟಿಗೆದ್ದು ಗುಂಡು ಹಾರಿಸಿದ್ದ. ಹೊಟ್ಟೆಗೆ ಗುಂಡೇಟು ತಿಂದು ಆಸ್ಪತ್ರೆಗೆ ಸೇರಿದ್ದ 42 ವರ್ಷದ ಮಹಿಳೆ ಕೊನೆಗೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

TV9 Kannada


Leave a Reply

Your email address will not be published.