ಇಷ್ಟು ದಿನ ಪ್ರತಿಯೊಬ್ಬರು ಬಹಳ ಕಾತುರದಿಂದ ಕಾಯ್ತಿದ್ದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಶುರುವಾಗ್ತಾಯಿದೆ. ಇದು ಎಲ್ಲರಿಗೂ ಖುಷಿ ಕೂಡಾ ನೀಡಿದೆ. ಇವತ್ತು ರೆಕಾರ್ಡಿಂಗ್ ಶುರುವಾಗಿದೆ. ಈಗಾಗ್ಲೇ ಈ ಬಗ್ಗೆ ಬಿಗ್​ಬಾಸ್​ ಶೋನ ಹೋಸ್ಟ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಟ್ವೀಟ್​ ಮಾಡಿದ್ದಾರೆ.

‘ಬಿಗ್‌ಬಾಸ್‌ ಸ್ಟೇಜ್‌ಗೆ ಹೋಗಲು ಸಜ್ಜಾಗಿದ್ದೇನೆ. ಸ್ಪರ್ಧಿಗಳು ಬ್ರೇಕ್‌ ತೆಗೆದುಕೊಂಡಿದ್ದಾರೆ. ಹೊರಗೆ ಸುತ್ತಾಡಿದ್ದಾರೆ. ಅವರವರ ಸ್ಥಾನಗಳು ಏನೇನು ಅಂತಾ ಕಂಡುಕೊಂಡಿದ್ದಾರೆ. ಜನಪ್ರಿಯತೆಯ ಅರಿವು ಇದೆ. ಯಾಱರು ಏನೇನೂ ಅಂತಾ ತಿಳಿದುಕೊಂಡಿದ್ದಾರೆ. ಜನಾಭಿಪ್ರಾಯ ಗೊತ್ತಾಗಿದೆ.. ಮತ್ತೆ ಪ್ರವೇಶ ಮಾಡ್ತಿದ್ದಾರೆ.. ಇದು ಹೊಸದು.. ಮಜಾವೂ ಇದೆ’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ನಾಳೆಯಿಂದ ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗ್ತಿದೆ.

The post ಕಿಚ್ಚನೇ ಆರಂಭಿಸಲಿದ್ದಾರೆ ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್‌ appeared first on News First Kannada.

Source: newsfirstlive.com

Source link