ಕರ್ನಾಟಕ, ಮಹಾರಾಷ್ಟ್ರ, ಹೈದರಾಬಾದ್​ ಎನ್ನದೇ ದೇಶ- ವಿದೇಶಗಳಲ್ಲಿಯೂ ಕಿಚ್ಚನ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಅದರಲ್ಲೂ ಕಿಚ್ಚನ ಸ್ಟೈಲ್​ಗೆ ಮನಸೋಲದ ಅಭಿಮಾನಿಗಳೇ ಇಲ್ಲ. ಅದರಲ್ಲೂ ಕಿಚ್ಚನ ಸ್ಟೈಲ್​ ಆ್ಯಂಡ್​ ಆ್ಯಟಿಟ್ಯೂಡ್​​ ಕ್ಯೂಟ್​ ಆಗಿ ಕಾಪಿ ಮಾಡೋರು ಪುಟ್ಟ ಅಭಿಮಾನಿಗಳೇ. ಇದೀಗ ಅದೇ ಅಭಿಮಾನಿ ಬಳಗದ ಒಬ್ಬರಿಗೆ ಕಿಚ್ಚ ಬಿಗ್​ ಅಪ್ಪುಗೆ ನೀಡಿದ್ದಾರೆ.

ಹೌದು.. ಪುಟ್ಟ ಅಭಿಮಾನಿಯೊಬ್ಬರ ಪ್ರೀತಿಗೆ ಮನಸೋತ ನಟ ಕಿಚ್ಚ ಸುದೀಪ್​, ಟ್ವೀಟ್​ ಮಾಡುವ ಮೂಲಕ ಬಿಗ್​ ಹಗ್​ ನೀಡಿದ್ದಾರೆ. ಪುಟ್ಟ ಅಭಿಮಾನಿಯೊಬ್ಬರು ಕಿಚ್ಚನಿಗಾಗಿ ತಮ್ಮ ಜೀವನದ ಅಮೂಲ್ಯ ಒಂಭತ್ತು ಗಂಟೆಗಳನ್ನ ನೀಡಿದ್ದಾರೆ. ಕಿಚ್ಚ ಸುದೀಪ್​ ರೂಬಿಕ್ಸ್​​ ಕ್ಯೂಬ್​ ಮೊಸಾಯಿಕ್​ ಮಾಡಿರುವ ಕಿಚ್ಚ ಫ್ಯಾನ್​, 475 ರೂಬಿಕ್ಸ್​​ ಕ್ಯೂಬ್ಸ್​​ ಬಳಸೋದರ ಜೊತೆಗೆ ಬರೋಬ್ಬರಿ ಒಂಭತ್ತು ಗಂಟೆಗಳನ್ನ ಇದರಲ್ಲಿ ಕಳೆದಿದ್ದಾರೆ.

ಇನ್ನು ಮೊಸಾಯಿಕ್​ ತಯಾರಿಸುವ ಟೈಮ್​ ಲ್ಯಾಪ್ಸ್​ ವಿಡೀಯೋವನ್ನ ಪೋಸ್ಟ್​ ಮಾಡಿರುವ ಅಭಿಮಾನಿ ಸುದೀಪ್​ಗೆ ಈ ವಿಡಿಯೋ ತಲುಪುವುದಕ್ಕೆ ಸಹಾಯ ಮಾಡಿ ಅಂತಾನೂ ಮನವಿ ಮಾಡಿದ್ದರು. ಈ ಮನವಿ ಓಗೊಟ್ಟ ನಟ ಸುದೀಪ್​, ವಿಡಿಯೋ ರೀ-ಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ. ‘ಥ್ಯಾಂಕ್ಯೂ ಸೋ ಮಚ್​ ಮೈ ಫ್ರೆಂಡ್​​. ನಿಮ್ಮ ಪ್ರೀತಿ ಹಾಗೂ ಶ್ರಮಕ್ಕೆ ನನಗೆ ಮಾತೇ ಬರ್ತಿಲ್ಲ. ಬಿಗ್​ ಹಗ್​, ಸೇಫಾಗಿರಿ’ ಅಂತ ಟ್ವೀಟ್​ ಮಾಡಿದ್ದಾರೆ.

ಪಿ.ಕೆ ಶಶಾಂಕ್​ ಅನ್ನುವವರ ಹೆಸರಿನಲ್ಲಿ ಈ ಟ್ವಿಟರ್​ ಖಾತೆಯಿದ್ದು, ಮೊಸಾಯಿಕ್​ ಮಾಡುವ ಬಾಲಕನ ಖಾತೆ ಅಂತಾನೇ ಅಂದಾಜಿಸಬಹುದು. ಸಾಕಷ್ಟು ಗಣ್ಯ ವ್ಯಕ್ತಿಗಳ ಮೊಸಾಯಿಕ್​ ರೆಡಿ ಮಾಡಿರುವ ಈ ಬಾಲಕ ಸದ್ಯ ಕಿಚ್ಚನ ಮನ ಗೆದ್ದಿರೋದೇ ವಿಶೇಷ.

The post ಕಿಚ್ಚನ ಬಿಗ್​ ಅಪ್ಪುಗೆ; ಪುಟ್ಟ ಅಭಿಮಾನಿ ಕಲೆಗೆ ಮನಸೋತ ಕಿಚ್ಚ ಸುದೀಪ್​ appeared first on News First Kannada.

Source: newsfirstlive.com

Source link