ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಚ್ಚ ಸುದೀಪ್ ಸ್ಯಾಂಡಲ್​ವುಡ್ ಹಿರಿಯ ಪೋಷಕ ನಟ ಮತ್ತು ನಟಿಯರ ಆರೋಗ್ಯ ವಿಚಾರಿಸಿ ಹೆಲ್ದಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಇದರ ಜೊತೆಗೆ ಕಿಚ್ಚ ಸುದೀಪ್​ ಮನದಾಳದ ಪತ್ರವನ್ನೂ ಬರೆದಿದ್ದಾರೆ. ಕಿಚ್ಚನ ಈ ಮಾನವೀಯ ಕೆಲಸಕ್ಕೆ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಧನ್ಯವಾದಗಳನ್ನ ತಿಳಿಸಿದ್ದಾರೆ.

90 ವರ್ಷಗಳ ಕನ್ನಡ ಚಿತ್ರರಣಗದ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಕೆಲಸವನ್ನ ನಟ ಕಿಚ್ಚ ಸುದೀಪ್​ ಮಾಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾಗ್ತಿರುವ ಕಿಚ್ಚ ಸುದೀಪ್​, ಸದ್ಯ ಹಿರಿಯ ಕಲಾವಿದರಿಗೆ ನೆರವಾಗ್ತಿರೋದು ಶ್ಲಾಘನೀಯ. ನಟ ಡಿಂಗ್ರಿ ನಾಗರಾಜ್​ ಕಿಚ್ಚನಿಗೆ ಧನ್ಯವಾದ ತಿಳಿಸುವುದರ ಜೊತೆಗೆ ಒಂದು ಪುಟ್ಟ ಮನವಿಯನ್ನೂ ಮಾಡಿದ್ದಾರೆ. ಹೌದು.. ಸಾಧ್ಯ ಆದ್ರೆ ಹಿರಿಯ ಕಲಾವಿದರಿಗೆ ಕಿಚ್ಚನ ಸಿನಿಮಾಗಳಲ್ಲಿ ಒಂದೆರಡು ದಿನಗಳ ಕಾಲ ಕೆಲಸ ಕೊಡುವಂತೆ ಡಿಂಗ್ರಿ ನಾಗರಾಜ್​ ಕೇಳಿಕೊಂಡಿದ್ದಾರೆ.

‘ಕನ್ನಡ ಚಿತ್ರರಂಗ ಹುಟ್ಟಿ ಸರಿ ಸುಮಾರು 90 ವರ್ಷಗಳಾಗ್ತಿದೆ. ಈ 90 ವರ್ಷಗಳಲ್ಲಿ ಕನ್ನಡ ಚಲನಚಿತ್ರವನ್ನ 60-70 ವರ್ಷಗಳಿಂದ ಆಳಿ ಇನ್ನೂ ಬದುಕಿರುವ ಹಿರಿಯ ಕಲಾವಿದರಿಗೆ ನಮ್ಮ ಕಿಚ್ಚ ಸುದೀಪ್​ ಅವರು ಕಲಾವಿದರ ಹೆಸರುಗಳನ್ನ ಪಡೆದು, ಅವರವರ ಮನೆಗಳಿಗೆ ಹೋಗಿ ಅವರಿಗೆ ಸಾಂತ್ವನ ಹೇಳಿ, ಅವರ ಆರೋಗ್ಯವನ್ನ ವಿಚಾರಿಸಿ, ಅವರಿಗೆ ಗಿಫ್ಟ್​​ ಬಾಕ್ಸ್​ಗಳನ್ನ ನೀಡ್ತಿದ್ದಾರೆ. ಅವರೆಲ್ಲಾ ನನಗೆ ಕರೆ ಮಾಡಿ ಸುದೀಪ್​ ಅವರಿಗೆ ಶುಭ ಹಾರೈಸಿದ್ದಾರೆ. ನಮ್ಮಂಥ ಪೋಷಕ ಕಲಾವಿದರ ಮೇಲೆ ನೀವು ಇಟ್ಟುಕೊಂಡಿರುವ ಪ್ರೀತಿ-ವಿಶ್ವಾಸವನ್ನ ನಾವು ಸದಾ ಕಾಲ ಉಳಿಸಿಕೊಳ್ತೀವಿ. ನಿಮಗೆ ದೇವರು ಆಯುರಾರೋಗ್ಯವನ್ನ ಕರುಣಿಸಲಿ ಅಂತ ಬೇಡಿಕೊಳ್ತೀನಿ. ಈ ಸಂದರ್ಭದಲ್ಲಿ ನಿಮ್ಮನ್ನ ನಾನು ಕೇಳಿಕೊಳ್ಳೋದು ಇಷ್ಟೆ. ಸಾಧ್ಯ ಆದ್ರೆ ನಮ್ಮಂಥ ಹಿರಿಯ ಕಲಾವಿದರಿಗೆ ನಿಮ್ಮ ಸಿನಿಮಾಗಳಲ್ಲಿ ಒಂದೆರಡು ದಿನಗಳ ಕಾಲ ಕೆಲಸ ಕೊಡಿ.’

ಡಿಂಗ್ರಿ ನಾಗರಾಜ್​, ನಟ- ಪೋಷಕ ಕಲಾವಿದರ ಸಂಘದ ಅಧ್ಯಕ್ಷ.

ಸದ್ಯ ಕಿಚ್ಚನ ಈ ಕೆಲಸಕ್ಕೆ ಹಿರಿಯ ಕಲಾವಿದರು ಕಿಚ್ಚನನ್ನ ಮನದುಂಬಿ ಹರಸಿದ್ದಾರೆ. ಹಿರಿಯ ಕಲಾವಿದರಿಗೆ ರೇಷನ್​, ಹೆಲ್ದಿ ಫುಡ್​ ಕಿಟ್​ ವಿತರಣೆ ಮಾಡೋದರ ಜೊತೆಗೆ ಕಿಚ್ಚನ ಬಳಗ ಮಿಟ್ ಮಾಡುವ ಕಲಾವಿದರೇನಾದ್ರು ಕಷ್ಟದಲ್ಲಿ ಇದ್ದಾರೆಂದು ತಿಳಿದು ಬಂದ್ರೆ, ಅವ್ರಿಗೆ ಸಹಾಯ ಮಾಡಲು ಮುಂದಾಗಲಿದೆ ಕಿಚ್ಚ ಸುದೀಪ ಚಾರಿಟೆಬಲ್ ಟ್ರಸ್ಟ್.

The post ಕಿಚ್ಚನ ಮಾನವೀಯ ಕೆಲಸಕ್ಕೆ ಧನ್ಯವಾದ ಹೇಳಿ ಪುಟ್ಟ ಮನವಿ ಮಾಡಿದ ನಟ ಡಿಂಗ್ರಿ ನಾಗರಾಜ್​ appeared first on News First Kannada.

Source: newsfirstlive.com

Source link