ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ತಮ್ಮ ಹಾಡುಗಳ ಮೂಲಕ ಮಿಂಚಲು ಆರಂಭಿಸಿದ್ದ ಶಮಂತ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭದಲ್ಲಿಯೇ ಪ್ರೇಕ್ಷಕರನ್ನು ರಂಜಿಸಲು ಶುರುಮಾಡಿದ್ದಾರೆ.

ಕಳೆದ ಇನ್ನಿಂಗ್ಸ್‌ನಲ್ಲಿ ಶಮಂತ್ ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲದರಲ್ಲೂ ಅವರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಹೇಳಿದ್ದ ಮನೆ ಮಂದಿಗೆ ಇದೀಗ ಶಮಂತ್ ತಮ್ಮ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಉತ್ತರ ನೀಡುತ್ತಿದ್ದಾರೆ.

ಬಿಗ್‍ಬಾಸ್‍ನ ಕಳೆದ ವಾರದ ಪಂಚಾಯತಿ ಕಟ್ಟೆಯಲ್ಲಿ ಮನೆಯ ಬಹುತೇಕ ಮಂದಿ ಶಮಂತ್‍ಗೆ ಚೊಂಬನ್ನು ನೀಡಿದ್ದರು. ಅಲ್ಲದೇ ಬಿಗ್‍ಬಾಸ್ ಕೂಡ ತಮ್ಮ ಮುಂದಿನ ಆದೇಶದವರೆಗೂ ಚೊಂಬನ್ನು ಶಮಂತ್ ಕೈನಲ್ಲಿಯೇ ಇಟ್ಟುಕೊಂಡು ಓಡಾಡಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ತಮ್ಮ ಜೊತೆಯಲ್ಲಿಯೇ ಹಿಡಿದುಕೊಂಡಿದ್ದ ಚೊಂಬಿನ ಬಗ್ಗೆ ಶಮಂತ್ ಹಾಡೊಂದನ್ನು ಬರೆದಿದ್ದಾರೆ.

ಸದ್ಯ ಆ ಹಾಡನ್ನು ಈ ವಾರ ಕಿಚ್ಚ ಸುದೀಪ್ ಸುಮ್ಮುಖದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಮೊದಲಿಗೆ ಕಲರ್ ಕಲರ್ ಕಾಗೆ ಬಂತು, ನನ್ನ ಬಣ್ಣ ವೈಟ್ ಟೂ ಅಂತು, ಪಕ್ಕದಲ್ಲಿ ಕುಳಿತು ಹುಡುಗಿ ನಕ್ಕಳಂತೆ, ಅಷ್ಟೇ ಸಾಕು ಹುಡುಗ ಜಾರಿ ಬಿದ್ದನಂತೆ, ಮದುವೆ ಇನ್ವಿಟೇಷನ್‍ನನ್ನು ಕೊಟ್ಟಳಂತೆ, ಖಾಲಿ ದಿಂಬು ಕೈಗೆ ಚೊಂಬು, ಹಿಂದೆ ಮುಂದೆ ನೋಡಿ ನಂಬು.. ಎಂದು ಹಾಡು ಹೇಳಿದ್ದಾರೆ.

ಒಟ್ಟಾರೆ ಶಮಂತ್ ಹಾಡನ್ನು ಕೇಳಿ ಮನೆ ಮಂದಿಗೆಯೆಲ್ಲಾ ಫಿದಾ ಆದರೆ, ಕಿಚ್ಚ ಒಂದು ಚೊಂಬನ್ನು ಎಷ್ಟು ಸುಂದರವಾಗಿ ನೋಡಿದ್ದೀರಾ ಎಂದು ಹೇಳುತ್ತಾ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಕಿಚ್ಚನ ಮುಂದೆ ಕಲರ್ ಕಲರ್ ಕಾಗೆ ಬಂತು ಅಂದ ಶಮಂತ್ appeared first on Public TV.

Source: publictv.in

Source link