ಕಿಚ್ಚ ಸುದೀಪ್​ ತಮ್ಮ ನಟನೆ, ಸ್ಟೈಲ್​​​​ ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದ ಮೂಲಕವೂ ಅದೆಷ್ಟೋ ಜನರ ಮನಗೆದ್ದು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ತಾವು ಹುಟ್ಟಿದ ಮಣ್ಣು ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶ-ವಿದೇಶಗಳಲ್ಲೂ ಕಿಚ್ಚನಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ಕಿಚ್ಚನ ಸೇವಾ ಮನೋಭಾವವನ್ನ ಮಾದರಿಯಾಗಿಟ್ಟುಕೊಂಡು, ಅಭಿಮಾನಿಗಳು ಸುದೀಪ್​ ಹಾದಿಯಲ್ಲೇ ನಡೆಯುತ್ತಿದ್ದಾರೆ. ಕಷ್ಟ ಅಂದವರಿಗೆ, ಹಸಿದವರಿಗೆ ದಿನಸಿ ಕಿಟ್​ಗಳನ್ನ ನೀಡುತ್ತಿದ್ದಾರೆ.

ಹೌದು.. ‘ಬ್ಲೀಡ್​ ಫಾರ್​ ಕಿಚ್ಚ’ ಅನ್ನೋ ಹೆಸರಿನ ಕಿಚ್ಚನ ಅಭಿಮಾನಿಗಳ ಬಳಗ ಇದಾಗಿದ್ದು, ಲಾಕ್​​ಡೌನ್​ನಲ್ಲಿ ಕಷ್ಟ ಅನುಭವಿಸುತ್ತಿರುವವರಿಗೆ, ಹಸಿವಿನಿಂದ ಕಂಗೆಟ್ಟಿದ್ದವರಿಗೆ ದಿನಸಿ ಕಿಟ್​ಗಳನ್ನ ತಲುಪಿಸುತ್ತಿದ್ದಾರೆ. ದಿನಸಿ ಕಿಟ್​ಗಳ ಜೊತೆಗೆ ಅಗತ್ಯವಿರುವವರಿಗೆ ಮೆಡಿಕಲ್​ ಕಿಟ್​ಗಳನ್ನೂ ನೀಡುತ್ತಿದ್ದಾರೆ. ಕಿರಣ್​ ಹಾಗೂ ಗುರು ಈ ಬಳಗದ ನೇತೃತ್ವ ವಹಿಸಿದ್ದು, ಇದೀಗ ಸಹಾಯ ಪಡೆದುಕೊಂಡವರು ಈ ತಂಡಕ್ಕೆ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ.

ಇನ್ನು, ಕಳೆದ ವರ್ಷ ಲಾಕ್​ಡೌನ್​ ಆದಾಗಿನಿಂದ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ನಿತಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದೆ. ಈ ಬಾರಿ ಲಾಕ್​ಡೌನ್​ ಆದ ದಿನದಿಂದಲೂ ‘ಕಿಚ್ಚನ ಕೈ ತುತ್ತು’ ಅನ್ನುವ ಕಾನ್ಸೆಪ್ಟ್​​ನಲ್ಲಿ ಪ್ರತಿನಿತ್ಯ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಈಗಾಗಲೇ 10000 ಜನರಿಗೆ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ಕಡೆಯಿಂದ ದಿನಸಿ ಕಿಟ್​ಗಳನ್ನ ನೀಡಲಾಗಿದೆ. ಈಗ ಅದೇ ರೀತಿ ಕಿಚ್ಚನ ಅಭಿಮಾನಿಗಳು ಕಷ್ಟದಲ್ಲಿರುವವರಿಗೆ ಆಹಾರದ ಕಿಟ್ ವ್ಯವಸ್ಥೆ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ.

The post ಕಿಚ್ಚನ ಹಾದಿಯಲ್ಲೇ ಅಭಿಮಾನಿ ಬಳಗ.. ಹಸಿದವ್ರ ಹೊಟ್ಟೆ ತುಂಬಿಸೋ ಕಾಯಕದಲ್ಲಿ ಬ್ಯುಸಿ appeared first on News First Kannada.

Source: newsfirstlive.com

Source link