ಇದೊಂಥರ ಪಡ್ಡೆ ಫ್ಯಾನ್ಸ್​​ಗೆ ಛೋಟ ಸ್ಯಾಡ್​​​​ ನ್ಯೂಸು ಹೌದು, ಗುಡ್ಡೆ ಗುಡ್​​ ನ್ಯೂಸು ಹೌದು. ಶ್ರೀಲಂಕನ್ ಚಿಂಗಾರಿ, ಬಿಟೌಟನ್ ಬಂಗಾರಿ, ಜಾಕ್ವೆಲಿನ್ ಫರ್ನಾಂಡಿಸ್ ‘‘ವಿಕ್ರಾಂತ್ ರೋಣ’’ ಸಿನಿಮಾದ ಶೂಟಿಂಗ್ ಮುಗಿಸಿ ತಮ್ಮ ಗೋಲ್ಡನ್ ಪಾದವನ್ನ ಬಾಂಬೆ ಕಡೆ ಬೆಳೆಸಿದ್ದಾರೆ. ಇದೇ ವೇಳೆ ಶೂಟಿಂಗ್​ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿರುವ ನಟ ಸುದೀಪ್​​, ನನ್ನ ಫೋಟೋಶೂಟ್​ ಎರಡು ನೆಚ್ಚಿನ ಫೋಟೋಗಳಿವು ಎಂದು ಜಾಕ್ವೆಲಿನ್​ ರೊಂದಿಗೆ ಇರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಫೋಟೋಶೂಟ್​ ಎರಡು ನೆಚ್ಚಿನ ಫೋಟೋಗಳಿವು. ಎಡಿಟ್ಟಿಂಗ್ ಮಾಡಿರೋ ಹಾಡಿನ ರಫ್​ ವಿಶ್ಯುಲ್​​ ನೋಡಿದ್ದು, ಜಾನಿ ಮಾಸ್ಟ್​ರ್​ಗೆ ಧನ್ಯವಾದ. ಶಿವು ಅವರ ಸೆಟ್​​ ಲುಕ್​​ ವಿಶೇಷವಾಗಿದ್ದು, ಜಾಕ್​ ಮಂಜು ಅವರಿಗೆ ಧನ್ಯವಾದ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಲಾಕ್ ಡೌನ್ ಆಗ್ಲಿ ಲಾಕ್ ಡೌನ್ ಆಗದೇ ಇರ್ಲಿ. ಅವಕಾಶ ಇದ್ದಾಗ ಶೂಟಿಂಗು, ಅವಕಾಶ ಇಲ್ದಾಗ ಎಡಿಟಿಂಗ್ ಮಾಡುತ್ತಾ ರಿಲೀಸ್ ಸನಿಹಕ್ಕೆ ಬರುತ್ತಿದೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ.. ಕಿಚ್ಚನ ಬೇರೆ ಬೇರೆ ಸಿನಿಮಾಗಳು ನಿರೀಕ್ಷೆಯ ತೂಕ ಒಂದಾದ್ರೆ ವಿಕ್ರಾಂತ್ ರೋಣ ಚಿತ್ರದ ನಿರೀಕ್ಷೆಯ ತೂಕವೇ ಮತ್ತೊಂದು ಲೆವಲ್​​​. ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಪ್ಯಾನ್ ವಲ್ಡ್ ರೆಂಜ್​​ಗೆ ಸಿನಿಮಾವನ್ನ ತೆರೆಗೆ ತಂದು ನಿಲ್ಲಿಸ ಬೇಕು ವಿಶ್ವಾದ್ಯಂತ ಕನ್ನಡ ಮಣ್ಣಿನ ರಂಜನೆಯ ಬಾವುಟವನ್ನ ಹಾರಿಸ ಬೇಕು ಎಂದು ಅನುಪ್ ಭಂಡಾರಿ ಫಿಲ್ಮ್ ಟೀಮ್ ಸಾಕಷ್ಟು ಕಸರುತ್ತು ಗಮನಿಸೋ ಗಮ್ಮತ್ತನ್ನ ಮಾಡ್ತಾನೆ ಇದೆ.

ನಾವು ಹೇಳ್ದಂಗೆ ನೀವು ಕೇಳ್ದಂಗೆ ಶ್ರೀಲಂಕನ್ ಚಿಂಗಾರಿ, ಬಿಟೌನ್ ಬಂಗಾರಿ ಜಾಕ್ವೆಲಿನ್ ಫರ್ನಾಂಡಿಸ್ ಬೆಂಗಳೂರಿಗೆ ಬಂದಾಯ್ತು ವಿಕ್ರಾಂತ್ ರೋಣನ ಶೂಟಿಂಗ್ ಮುಗಿಸಿ ಬಾಂಬೆಗೂ ಹೊರಾಟಾಯ್ತು. ಹೌದು.. ಆರು ದಿನಗಳ ಕಾಲ ಭವ್ಯ ಬೆಂಗಳೂರಿನಲ್ಲಿ ಟಿಕಾಣಿ ಹೋಡಿ ವಿಕ್ರಾಂತ್ ರೋಣ ಜೊತೆ ದಿಲ್ಕಿ ಡ್ಯಾನ್ಸ್ ಪ್ಲಸ್ ಮನ್ಕಿ ಆ್ಯಕ್ಟಿಂಗ್ ಮಾಡಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈ ಸೇರಿದ್ದಾರೆ. ಕಳೆದ ಗುರುವಾರ ರಾತ್ರಿ ಜಾಕ್ವೆಲಿನ್ ಫರ್ನಾಂಡಿಸ್ ವಹಿಸಿಕೊಂಡಿದ್ದ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಕಲರ್​ಫುಲ್ ಆಗಿ ಕಂಪ್ಲೀಟ್ ಆಗಿದ್ದು, ಆ ಬಳಿಕ ಬೆಂಗಳೂರಿನಿಂದ ಮುಂಬೈಗೆ ಹಾರಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್.

ಜಾಕ್ವಿ ವಿಕ್ರಾಂತ್ ರೋಣ ಸಿನಿಮಾ ಸೆಟ್​​ನಲ್ಲಿ ಇರೋ ಆರು ದಿನವೂ ಸಖತ್ ಸುಂದರ ಸುದ್ದಿಗಳು ಚಿತ್ರಪ್ರೇಮಿಗಳಿಗೆ ಸಿಕ್ತನೇ ಇದ್ವು. ಜಾಕ್ವಿಯನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ರು. ಫ್ಯಾನ್ಸ್​ಗಳ ಜೊತೆ ಶ್ರೀಲಂಕನ್ ಸಿಂಗಾರಿ ಬಿಗ್ ಸೆಲ್ಫಿ ಕ್ಲಿಕಿಸಿಕೊಂಡು ಖುಷ್ ಆಗಿದ್ರು.

ಶ್ರೀಲಂಕನ್ ಪ್ರಜೆಯಾಗಿದ್ದರು ಇಂಡಿಯನ್ ಸಿನಿ ರಸಿಕರಿಗೆ ಜಾಕ್ವೆಲಿನ್ ಫರ್ನಾಂಡಿಸ್ ಅಚ್ಚು ಮೆಚ್ಚು. ಕಾರಣ ಈಕೆ ಸಿನಿಮಾ ಸೆಟ್​​ನಲ್ಲಿ ನಡೆದುಕೊಳ್ಳುವ ಒಳ್ಳೆಯ ನಡೆತೆ ಮತ್ತು ನಮ್ಮ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಜಾಕ್ವಿಗಿರೋ ಗೌರವ. ಆರು ದಿನಗಳ ಕಾಲ ಬೆಂಗಳೂರಿನಲ್ಲಿ ಇದ್ದ ಜಾಕ್ವಿ ಕನ್ನಡವನ್ನ ಕಲಿಯೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಹೋಗುವಾಗ ಜಾಕ್ವಿ ಆರು ದಿನದಲ್ಲಿ ನೀವು ಕಲಿತ ಕನ್ನಡ ಪದ ಯಾವುದು ಅಂತ ಕೇಳಿದಾಗ ಸ್ವಲ್ಪ ಜೋಪಾನ ಅನ್ನೋ ಚಿಕ್ಕ ವಾಕ್ಯವನ್ನ ಹೇಳಿ ಸಂತೋಷ ಪಟ್ಟಿದ್ದಾರೆ.

ಒಟ್ಟಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ವಿಕ್ರಾಂತ್ ರೋಣ ತಂಡಕ್ಕೆ ಹೊಸ ಜೋಶ್ ಕೊಟ್ಟಿದೆ.. ನಿರ್ಮಾಪಕ ಜಾಕ್ ಮಂಜು ಕೋಟಿ ಕೋಟಿ ಖರ್ಚ್ ಮಾಡಿ ದೊಡ್ಡ ಕನಸಿನೊಂದಿಗೆ ವಿಕ್ರಾಂತ್ ರೋಣ ಸಿನಿಮಾವನ್ನ ಯುನಿವರ್ಸೆಲ್ ಪ್ರೇಕ್ಷಕರ ಮುಂದೆ ಇಡಲು ಶ್ರಮಿಸುತ್ತಿದ್ದಾರೆ.

The post ಕಿಚ್ಚು ಹಚ್ಚಿದ ಜಾಕ್ವೆಲಿನ್.. ಸ್ಮೈಲಿಗೆ ಸೋತ ವಿಕ್ರಾಂತ್ ರೋಣ appeared first on News First Kannada.

Source: newsfirstlive.com

Source link