ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಹಬ್ಬ ಎನ್ನುವುದು ತಿಳಿದಿರುವ ವಿಚಾರ. ಆದರೆ ಇದರ ಹಿಂದೆ ವೀಕೆಂಡ್ ಎರಡು ದಿನಗಳಿಗಾಗಿ ದೊಡ್ಮನೆ ಮಂದಿ ಇಷ್ಟೆಲ್ಲಾ ತಯಾರಾಗ್ತಾರಾ, ಇಷ್ಟೆಲ್ಲಾ ಯೋಚಿಸುತ್ತಾರಾ ಎಂಬ ಆಶ್ಚರ್ಯ ಇದೀಗ ಕಾಡತೊಡಗಿದೆ.

ಹೌದು ಈ ಕುತೂಹಲವನ್ನು ಕಿಚ್ಚ ಸುದೀಪ್ ಅವರು ಈ ಬಾರಿಯ ಸೂಪರ್ ಸಂಡೇಯಲ್ಲಿ ಕೆದಿಕಿದ್ದು, ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ಉತ್ತರ ನೀಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಮಾತನಾಡಲು ಸ್ಪರ್ಧಿಗಳು ಇಷ್ಟೆಲ್ಲಾ ತಯಾರಾಗ್ತಾರಾ ಎಂದು ಆಶ್ಚರ್ಯವಾಗುತ್ತಿದೆ. ಎಲ್ಲರೂ ಅವರ ಬಟ್ಟೆ, ಮೇಕಪ್ ಬಗ್ಗೆ ಮಾತನಾಡಿದ್ದು, ಯಾವ್ಯಾವ ರೀತಿ ತಯಾರಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ವೀಕೆಂಡ್‍ನಲ್ಲಿ ಶೋನಲ್ಲಿ ಭಾಗವಹಿಸಲು ಯಾವ ರೀತಿಯ ಬಟ್ಟೆ ಹಾಕೋಬೇಕು, ಹೇರ್ ಸ್ಟೈಲ್ ಯಾವ ರೀತಿ ಇರಬೇಕೆಂದು ಬಹುತೇಕ ಎಲ್ಲರಿಗೂ ಕನ್ಫ್ಯೂಸ್ ಇರುತ್ತದೆ. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಶುಭಾ ಪೂಂಜಾ, ದಿವ್ಯಾ ಸುರೇಶ್ ಎಂದು ಮನೆ ಮಂದಿ ಹೇಳಿದ್ದಾರೆ. ಅಲ್ಲದೆ ಇನ್ನೂ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್ ಸಂಬರಗಿ ಉತ್ತರಿಸಿದ್ದು, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವ ವೀಕೆಂಡ್‍ಗೆ, ಯಾವ ಬಟ್ಟೆ, ಯಾವ ರೀತಿ ಕಾಸ್ಟೂಮ್ ಮಾಡಿಕೊಳ್ಳಬೇಕೆಂಬ ಪಟ್ಟಿ ಅವರ ಕಾಸ್ಟೂಮ್ ಡಿಸೈನರ್ ಇಂದ ಬಂದಿರುತ್ತದೆ. ಅವರಿಗೆ ಕನ್ಫ್ಯೂಸ್ ಆಗಲ್ಲ. ಆದರೆ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಹೆಚ್ಚು ಕನ್ಫ್ಯೂಸ್ ಆಗುತ್ತಾರೆ ಎಂದು ಹೇಳಿದ್ದಾರೆ.

ಹಿಯರಿಂಗ್, ಫಿಂಗರ್, ಹೇರ್ ಸ್ಟೈಲ್, ಬಟ್ಟೆ, ಸ್ಲಿಪ್ಪರ್ ತನಕ ದಿವ್ಯಾ ಸುರೇಶ್ ಅವರಿಗೆ ಕನ್ಫ್ಯೂಶನ್ ಇರುತ್ತದೆ. ಹೀಲ್ಸ್ ಹಾಕ್ಲಾ, ಸ್ಲಿಪ್ಪರ್ ಹಾಕ್ಲಾ, ಶೂ ಹಾಕ್ಲಾ ಎಂದು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ವೀಕೆಂಡ್‍ಗೆ ಹೇಗೆ ರೆಡಿ ಆಗ್ತಾರೆ, ಎಷ್ಟೆಲ್ಲಾ ಕಷ್ಟ ಪಡ್ತಾರೆ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಕೆದಕಿದ್ದಾರೆ. ಅಲ್ಲದೆ ಮುಂದಿನ ಶನಿವಾರ ನಿಮ್ಮಿಷ್ಟದ ಬಟ್ಟೆ ಹಾಕಿಕೊಂಡು ಬನ್ನಿ, ಯಾರು ಚೆನ್ನಾಗಿ ಕಾಣುತ್ತಾರೋ ನೋಡೋಣ ಎಂದು ಸುದೀಪ್ ಹೇಳಿದ್ದಾರೆ.

The post ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು? appeared first on Public TV.

Source: publictv.in

Source link